nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್‌ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್‌

    September 29, 2026

    ರೇಣುಕಾಸ್ವಾಮಿ ಕೊಲೆ ಕೇಸ್‌: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!

    September 29, 2026

    ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

    September 29, 2026
    Facebook Twitter Instagram
    ಟ್ರೆಂಡಿಂಗ್
    • ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್‌ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್‌
    • ರೇಣುಕಾಸ್ವಾಮಿ ಕೊಲೆ ಕೇಸ್‌: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!
    • ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
    • ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್‌ ಆರ್‌ ಟಿಸಿ ಬಸ್‌ ನ ಬ್ಯಾಟರಿ ಕಳವು!
    • ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
    • ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
    • ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ
    • ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುತಂತ್ರದಿಂದ ನನ್ನ ಸೋಲಾಯಿತು: ಚುನಾವಣಾ ಸೋಲಿನ ಬಗ್ಗೆ ಮಸಾಲಾ ಜಯರಾಮ್ ಅಭಿಪ್ರಾಯ
    ತುರುವೇಕೆರೆ May 17, 2023

    ಕುತಂತ್ರದಿಂದ ನನ್ನ ಸೋಲಾಯಿತು: ಚುನಾವಣಾ ಸೋಲಿನ ಬಗ್ಗೆ ಮಸಾಲಾ ಜಯರಾಮ್ ಅಭಿಪ್ರಾಯ

    By adminMay 17, 2023No Comments2 Mins Read
    masala jayaram

    ತುರುವೇಕೆರೆ: ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿ, ಶಾಸಕನಾಗುವ ಮಟ್ಟಕ್ಕೆ ಬೆಳೆದು ಬಂದವನು. ಎಲ್ಲಾ ರೀತಿಯ ಅಡೆತಡೆಗಳನ್ನು ದಾಟಿ ಬೆಳೆದು ಬಂದಿದ್ದೇನೆ, ಚುನಾವಣಾ ಕಣದಲ್ಲಿ ಹಲವು ಗೆಲುವು ಸೋಲುಗಳನ್ನು ಕಂಡಿದ್ದೇನೆ. ಆದರೆ ನನಗೆ ಈ  ಚುನಾವಣೆಯಲ್ಲಿ ಅವರು ಮಾಡಿದ  ಕುತಂತ್ರದಿಂದ ನನ್ನ ಸೋಲಾಯಿತು ಎಂದು ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯಪಟ್ಟರು.

    ತೋಟದಮನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ  ಕಾರ್ಯಕರ್ತರ ಆತ್ಮಾವಲೋಕನ  ಸಭೆಯಲ್ಲಿ ಮಾತನಾಡಿದ ಅವರು, ಅವರ ಮೋಸದ ಆಟಕ್ಕೆ ಕುತಂತ್ರಕ್ಕೆ ಇವತ್ತು ಈ ತಾಲೂಕಿನ ಜನ ಬಲಿಯಾಗಿದ್ದಾರೆ. ಅವರು ಮಾಡಿದ ಮೋಸ ಒಂದಾ ಎರಡಾ? ನಾನು ಈ ದಿನ ಚುನಾವಣೆಯಲ್ಲಿ  ಸೋತಿರಬಹುದು ಆದರೆ ನಾನು ಗೆದ್ದಿದ್ದೇನೆ. ನಿಮ್ಮ ಶ್ರಮ ನಿಮ್ಮ ಶಕ್ತಿ ನೀವು ಮಾಡಿದಂತಹ ಕೆಲಸ ಕಾರ್ಯ ಬೇರೆ ಪಕ್ಷದ ಬಂಧ ಕಾರ್ಯಕರ್ತರು ಸಹ ಒಟ್ಟಾಗಿ  ಶ್ರಮಪಟ್ಟು ಕೆಲಸ ಮಾಡಿದ್ದೀರಾ  ನಾನು ಸೋತಿಲ್ಲ ಇಲ್ಲಿ ಗೆದ್ದಿದ್ದೇನೆ ಎಂದರು.

    ನಾನು ಸೋತಿದ್ದರೆ ಕೇವಲ ಬರಿ 25,000 ಮತಗಳಿಗೆ ಸೀಮಿತವಾಗಬೇಕಾಗಿತ್ತು, ಆದರೆ 58000 ,ಮತಗಳನ್ನು ಪಡೆದಿದ್ದೇನೆ. ಆದರೆ ನಿಮ್ಮಗಳ ಮುಂದೆ ನಾನು ಗೆದ್ದಿದ್ದೇನೆ. ನಾನು ಸೋಲಬೇಕೆಂದು  ವಾಮಾಚಾರ ಮಾಡಿ ನಮ್ಮ ಮನೆ ಮುಂದೆ ಹಾಕಿ ಹೋಗಿದ್ದಾರೆ. ಅದರಿಂದ ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆಂದು ನೀವೇ ತಿಳಿದುಕೊಳ್ಳಿ , ಅವರು ಚುನಾವಣೆಯಲ್ಲಿ ಗೆದ್ದಿರಬಹುದು ಅವರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ,

    ಆದರೆ ಈ  ಯಾವುದೇ ರೀತಿ  ಗೆಲುವಲ್ಲ ನಿಮ್ಮಗಳ ಶಕ್ತಿಯೇ ನನ್ನ ಶಕ್ತಿ ಯಾವುದೇ ತರದ ವಾಮಾಚಾರವನ್ನು ಮಾಡಿಸಿದರೂ  ಜಯರಾಮಣ್ಣನಿಗೆ ನಿಮ್ಮಂತಹ ಕಾರ್ಯಕರ್ತರಗಳು ಇರುವ ತನಕ ಏನು ಮಾಡಲು ಆಗುವುದಿಲ್ಲ ಇವರು ಯಾವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ತೋರಿಸುತ್ತದೆ ಎಂದರು.

    ಬಾಣಸಂದ್ರ ರಮೇಶ್ ಅವರು ನನಗೆ ಯಾರು ಎನ್ನುವುದೇ ಗೊತ್ತಿಲ್ಲ. ಎಮ್.ಟಿ.ಕೃಷ್ಣಪ್ಪನವರು ನನ್ನನ್ನು ವಿಡಿಯೋ ಮಾಡಿ ಕೊಲೆಗಾರ ಎಂಬಂತೆ  ಹೇಳಿಕೆ ಕೊಟ್ಟು ಖಳನಾಯಕನಂತೆ ಬಿಂಬಿಸಿದ್ದಾರೆ. ರಮೇಶ್ ಗೂ ನನಗೂ  ಯಾವುದೇ ಸಂಬಂಧವಿಲ್ಲ. ಒಂದು ದಿವಸವು ಕೂಡ ಅವನನ್ನು ನಾನು ಮಾತನಾಡಿಸಿಲ್ಲ ,ಅವರು ಹೇಳುತ್ತಾರೆ  ನಾನು ಅವನನ್ನು ಕಿಡ್ನಾಪ್ ಮಾಡಿಸಿ ಕೊಲೆ ಮಾಡಿಸಿ ಬಿಟ್ಟಿದ್ದೇನೆ ಎಂದು, ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ಕೊಟ್ಟು  ಕೀಳು ಮಟ್ಟಕ್ಕೆ ಇಳಿದಿರುವುದು ಈ ತಾಲೂಕಿನ ದುರಂತ ತಮ್ಮ ವೈಯಕ್ತಿಕ ಲಾಭಕ್ಕಾಗಿ ಯಾರನ್ನು ಬೇಕಾದರೂ ಬಲಿಕೊಡುವುದು ಇವರ ಜಾಯಮಾನವಾಗಿದೆ. ಆದರೆ ಕೊಲೆಯಾಗಿರುವವನು ಬೆಳಗ್ಗೆ ಹೇಗೆ ಬಂದ. ಇದೆಲ್ಲ ಒಂದು ಷಡ್ಯಂತ್ರ ನನ್ನನ್ನು ಸಾರ್ವಜನಿಕರಲ್ಲಿ ಕೊಲೆಗಾರನನ್ನಾಗಿ ಮಾಡಲು ನಡೆಸಿದ ಷಡ್ಯಂತರವಾಗಿದ್ದು ಜನಗಳು ಇದನ್ನು ಅರ್ಥ ಮಾಡಿಕೊಳ್ಳದೆ ಅವರನ್ನು ಗೆಲ್ಲಿಸಿದ್ದಾರೆ ಎಂದರು.

    ಈ ತರದ ಕೃತ್ಯ  ನಡೆದಿದ್ದರೆ ಪೊಲೀಸರಲ್ಲಿ ಕಂಪ್ಲೇಂಟ್ ಏಕೆ ಕೊಡಲಿಲ್ಲ ಅಥವಾ ಅವರ ಹೆಂಡತಿಯಲ್ಲಿ ಕೈಯಲ್ಲಿ ಯಾಕೆ ಕೊಡಿಸಲಿಲ್ಲ  ಇದೆಲ್ಲ ನೋಡುತ್ತಿದ್ದರೆ ಅನುಮಾನಗಳು ಬರದೇ ಇರುವುದಿಲ್ಲ ಎಂದರು . ಇದೆಲ್ಲ ಇವರ ನಾಟಕದ ಕಂಪನಿಯ ನಾಟಕಗಳು ಎಂದು ಆರೋಪ ಮಾಡಿದರು.

    ನಾನು ನಿಮ್ಮ ಜೊತೆಗಿದ್ದೇನೆ ಯಾವುದೇ ಕಾರಣಕ್ಕೂ ದ್ರುತಿಗೆಡಬೇಡಿ ನಮ್ಮ ಮುಖಂಡರುಗಳಾಗಲಿ ಕಾರ್ಯಕರ್ತರುಗಳಾಗಲಿ ಸ್ವಲ್ಪವಾದರೂ ಹೆಚ್ಚು ಕಡಿಮೆ ಆದರೆ,  ನಾನಂತೂ ಸುಮ್ಮನಿರುವವನಲ್ಲ ಅದರ ಬೆಲೆಯನ್ನು ಅವರು ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಎಲ್ಲಾ ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತೇನೆ ನೀವುಗಳು ಯಾವುದೇ ಕಾರಣಕ್ಕೂ ಸುಖಾ ಸುಮ್ಮನೆ ಗಲಾಟೆಗಳನ್ನು ಅವರ ಹತ್ತಿರ ಮಾಡಿಕೊಳ್ಳಬೇಡಿ,  ಅವರೇ ಕಾಲು ಕೆರೆದು ಬಂದರೆ ಸುಮ್ಮನೆ ಬಿಡುವವನಲ್ಲ, ಇದನ್ನು ನಮ್ಮ ವಿರೋಧಿಗಳು ಅರ್ಥ ಮಾಡಿಕೊಳ್ಳಿ ಎಂದರು.

    ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ  ಮೃತ್ಹುಂಜಯ. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಬಾಕರ್ .ಮಾಜಿ ಅಧ್ಯಕ್ಷರಾದ ಚಿದಾನಂದ್. ಅಂಜನ್ಕುಮಾರ್. ಡೊಂಬರನಹಳ್ಳಿ ಬಸವರಾಜು. ಕೊಂಡಜ್ಜಿ ವಿಶ್ವನಾಥ್. ಕಡೆಹಳ್ಳಿ ಸಿದ್ದೇಗೌಡ . ಸಿ.ಎಸ್. ಪುರ ಕುಮಾರ್ ಸೇರಿದಂತೆ ಹಲವರಿದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ತುರುವೇಕೆರೆ: ಸಮುದಾಯ ಸಂಘಟಕ ಹುದ್ದೆಗೆ ಅರ್ಜಿ ಆಹ್ವಾನ

    September 21, 2026

    ಸಾಂವಿಧಾನಿಕ ಜವಾಬ್ದಾರಿಯಿಂದ ಶಾಸಕರ ಪಲಾಯನ: ತುರುವೇಕೆರೆಯಲ್ಲಿ ಕಾಂಗ್ರೆಸ್ ಮುಖಂಡರ ಆರೋಪ

    September 14, 2026

    ತುರುವೇಕೆರೆ: 25 ಕೋಟಿ ರೂ. ಕಾಮಗಾರಿಗಳ ತನಿಖೆಗೆ ಆಗ್ರಹ: ಕಾಂಗ್ರೆಸ್ ಮುಖಂಡರಿಂದ ಉಪವಾಸ ಸತ್ಯಾಗ್ರಹ

    September 8, 2026

    Comments are closed.

    Our Picks

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್‌ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್‌

    September 29, 2026

    ಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಎಸೆದು ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ,…

    ರೇಣುಕಾಸ್ವಾಮಿ ಕೊಲೆ ಕೇಸ್‌: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!

    September 29, 2026

    ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

    September 29, 2026

    ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್‌ ಆರ್‌ ಟಿಸಿ ಬಸ್‌ ನ ಬ್ಯಾಟರಿ ಕಳವು!

    September 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.