ಜಾತಿ ಗಣತಿ ವರದಿ ಎಂದೇ ಕರೆಯಲಾಗುತ್ತಿರುವ ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕೆಂಬ ಆಗ್ರಹ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯಗಳು(ಎಂಬಿಸಿ) ಮತ್ತು ಆದಿವಾಸಿಗಳು ಸಹ ಒಳ ಮೀಸಲಾತಿಯ ಭರವಸೆಯೊಂದಿಗೆ ಜಾತಿ ಗಣತಿ ವರದಿಗಾಗಿ ಕಾಯುತ್ತಿದ್ದಾರೆ.
2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ ಸಿದ್ಧವಾಗಿದ್ದ ಜಾತಿ ಗಣತಿ ವರದಿಗೆ ಸದಸ್ಯ ಕಾರ್ಯದರ್ಶಿ ಅಂಕಿತ ಹಾಕದ ಕಾರಣ ಇನ್ನೂ ಬಿಡುಗಡೆ ಮಾಡಿಲ್ಲ.


