ಬೆಂಗಳೂರಿನಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಶಂಕರ್ ನಾಗ್ ಬಸ್ ನಿಲ್ದಾಣದ ಆಟದ ಮೈದಾನದಲ್ಲಿ ನೃತ್ಯ ತರಗತಿಯಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಸಕ ಕೆ ಗೋಪಾಲಯ್ಯ ಪ್ರಮಾಣ ಪತ್ರ ವಿತರಿಸಿದರು.
ಇದೇ ವೇಳೆ ಬಿ. ಡಿ. ಶ್ರೀನಿವಾಸ್, ನಿಸರ್ಗ ಜಗದೀಶ್, ಜಯಸಿಂಹ, ಸಿಮೆಂಟ್ ಶ್ರೀನಿವಾಸ್, ಅಕಾಡೆಮಿಯ ಶಿಕ್ಷಕ ಕೆ. ಎಂ. ಮಹೇಶ್ ಉಪಸ್ಥಿತರಿದ್ದರು.


