ಬೆಂಗಳೂರು: ಜ್ಯುವೆಲರಿ ಅಂಗಡಿಯಲ್ಲಿ ಕೆಲಸಗಾರನಾಗಿ ಸೇರಿ ಕಳ್ಳತನ ಮಾಡಿದ್ದ 1 ಕೆ.ಜಿ 262 ಗ್ರಾಂ ಚಿನ್ನದ ಆಭರಣಗಳನ್ನು ಅಂತರ್ ರಾಜ್ಯ ಕಳ್ಳರ ಬಂಧನವಾಗಿದೆ.
ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಆಗಸ್ಟ್ 28 ದ ರಂದು ಆಂದ್ರದ ನೆಲ್ಲೂರಿನ ಮಹೇಶ್ ಮತ್ತು ಶಕ್ತಿ ಗೋಲ್ಡ್ ಇವರ ಅಂಗಡಿಯ ಮಾಲೀಕರಿಗೆ ಒಟ್ಟು 1 ಕೆಜಿ 2620 ತಂದ ಚಿನ್ನದ ಆಭರಣಗಳನ್ನು ಕೊಟ್ಟು ಬರಲು ಕಳುಹಿಸಿಕೊಟ್ಟಿರುತ್ತಾನೆ. ಸೆಲ್ಸ್ ಮ್ಯಾನ್ ಆಗಿ ನೆಲ್ಲೂರಿಗೆ ಹೋಗಿದ್ದಲ್ಲದೇ ಮೊಬೈಲ್ ಮೂಲಕ ಅಂಗಡಿ ಮಾಲೀಕರಿಗೆ ನೆಲ್ಲೂರಿನಲ್ಲಿ ತನ್ನನ್ನು ಯಾರೋ ಅಪರಿಚಿತರು ಅಡ್ಡಗಟ್ಟಿ ತನ್ನ ಕೈಯಲ್ಲಿದ್ದ ಚಿನ್ನದಿಂದ ಕೂಡಿದ್ದ ಬ್ಯಾಗ್ ನ್ನು ದೋಚಿರುತ್ತಾರೆ ಎಂದಿರುತ್ತಾನೆ. ಅಲ್ಲಿ ದೂರನ್ನು ದಾಖಲಿಸಿದ್ದಾನೆ. ಈ ಸಂಬಂಧ ಅಂಗಡಿ ಮಾಲೀಕರಿಂದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ಕೈಗೊಂಡು, ಸೇಲ್ಸ್‌ಮ್ಯಾನ್ ನಿಂದ ನಿಜವಾಗಿ ನಡೆದ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ. ನಂತರ ಸೆಲ್ಸ್‌ಮ್ಯಾನ್ ಆರೋಪಿಯನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಪಡೆದು ಆತನು ನೀಡಿದ ಮಾಹಿತಿ ಮೇರೆಗೆ ರಾಜಸ್ಥಾನದಲ್ಲಿ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 1 ಕೆ.ಜೆ. 202 ಗಾ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ, ಇದರ ಒಟ್ಟು ಮೌಲ್ಯ ದುಮಾರು 775 ಲಕ್ಷಗಳಾಗಿರುತ್ತವೆ.


