ಉತ್ತರಾಖಂಡ: ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಉಡುಗೆಯಾದ ಪೇಟ ಮತ್ತು ಉಣ್ಣೆಯ ಶಾಲನ್ನು ತೊಟ್ಟು ಮೋದಿ ಅವರು ಪಾರ್ವತಿ ಕುಂಡ್‌ನ ತಟದಲ್ಲಿನ ಶಿವ -ಪಾರ್ವತಿ ದೇವಸ್ಥಾನದಲ್ಲಿ ಆರತಿ ಬೆಳಗಿದ್ದಾರೆ.
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಉತ್ತರಾಖಂಡಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಿಥೋರಗಢದ ಪಾರ್ವತಿ ಕುಂಡ್ ಗೆ ಭೇಟಿ ನೀಡಿ ಆದಿ ಕೈಲಾಸ್ ತುದಿಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿದ್ದಾರೆ.
ಪಿಥೋರಗಢದಲ್ಲಿ ಪ್ರಧಾನಿ ಅವರು ₹4,200 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಗಡಿಭಾಗದಲ್ಲಿರುವ ಜುಂಜಿ ಎನ್ನುವ ಗ್ರಾಮ ತೆರಳಿ ಸ್ಥಳೀಯ ಜನರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದಾರೆ. ಜತೆಗೆ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮಳಿಗೆಗೆ ತೆರಳಿ ವೀಕ್ಷಣೆ ಮಾಡಿದ್ದಾರೆ. ಪ್ರಧಾನಿ ಮೋದಿಯವರೊಂದಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ತೆರಳಿದ್ದರು.


