ಚೆನ್ನೈನಲ್ಲಿ ಇಬ್ಬರು ರೌಡಿ ಶೀಟರ್ ಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಎಐಎಡಿಎಂಕೆ ನಾಯಕ ಪಾರ್ತಿಬನ್ ಹತ್ಯೆ ಕೇಸ್ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಸರವಣನ್, ಮುತ್ತು ಎಂಬ ರೌಡಿ ಶೀಟರ್ ಗಳು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.
ಆತ್ಮರಕ್ಷಣೆಗಾಗಿ ಪೊಲೀಸ್ ಗುಂಡು ಹಾರಿಸಲಾಗಿದ್ದು, ರೌಡಿ ಶೀಟರ್ ಗಳಾದ ಮುತ್ತು ಸರವಣನ್ ಸಾವನ್ನಪ್ಪಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ.


