ಬೆಳಗಾವಿ: ಅಯೋದ್ಯೆಯ ರಾಮಮಂದಿರದಲ್ಲಿ ರಾಮ ಪ್ರತಿಷ್ಟಾಪನೆ ಅಂಗವಾಗಿ ವಿಶ್ವ ಹಿಂದು ಪರಿಷತ್ ವತಿಯಿಂದ ಅಕ್ಷತೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ರಾಘವೇಂದ್ರ ಕಾಗವಾಡ, ಆರ್ ಎಸ್ ಎಸ್ ಪ್ರಾಂತ ಕಾರ್ಯನಿರ್ವಾಹಕ ಜೇಠಾ ಬಾಯಿ ಪಟೇಲ, ಡಾ. ಸುಭಾಷ ಪಾಟೀಲ, ಸಂತೋಷ ವಾದ್ವಾ, ರಾಜೇಶ್ವರೀ ಸಂಬರಗೀಮಠ, ಕ್ರಷ್ಣಾ ಭಟ್ ಪ್ರಾಂತ ವಿಶ್ವ ಹಿಂದುಪರಿಷತ್ ಕೋಶಾಧ್ಯಕ್ಷ ಮಹಿಳೆಯರು, ಪರಿವಾರದ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಉಪಸ್ತಿಯೊಂದಿಗೆ ಚೆನ್ನಮ್ಮ ಸರ್ಕಲ್ ಗಣಪತಿ ಮಂದಿರದಲ್ಲಿ ಮನೆ ಮನೆಗೆ ಅಕ್ಷತೆ ಕೊಡುವ ಅಭಿಯಾನಕ್ಕೆ ಚಾಲನೆ ನೀಡಿದರು.
ಪೂಜ್ಯ ಶಿವಸಿದ್ದ ಸೋಮೇಶ್ವರ ಸ್ವಾಮೀಜಿಯವರು ಮಾತನಾಡುತ್ತಾ ಎಲ್ಲರ ಮನಸ್ಸಿನ ಭಕ್ತಿ ಭಾವದ ಪ್ರತೀಕ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠೆ ಆಗುತ್ತಾ ಇರುವದು ಭಾರತದ ಜನಮಾನಸದ ಹೆಮ್ಮೆಯ ಪ್ರತೀಕ. ಪ್ರತಿ ರಾಮಭಕ್ತರು ಇದರಲ್ಲಿ ಪಾಲ್ಗೊಂಡು ಭಾರತದ ಆಧ್ಯಾತ್ಮ ಇತಿಹಾಸ ಜಗತ್ತಿಗೆ ಪ್ರಸರಿಸಲಿ ಎಂದು ಆಶೀರ್ವಾದಿಸುತ್ತ ನೂರಾರು ಹೋರಾಟ ಮಾಡಿ ಹಿಂದು ಸಂಸ್ಕೃತಿ ಉಳಿಸುವ ವಿಶ್ವ ಹಿಂದುಪರಿಷತ್ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವಂತೆ ಕರೆ ಕೊಟ್ಟರು.


