ಬಾಗಲಕೋಟೆ: ರಾಜಸ್ಥಾನದ ಜೈಪುರಲ್ಲಿ ನಡೆದ ವಿಶ್ವವಿದ್ಯಾಲಯಗಳ ಪುರುಷ ಮತ್ತು ಮಹಿಳಾ ಮಲ್ಲಕಂಬ ಕ್ರೀಡಾಕೂಟದಲ್ಲಿ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಿಂದ ಸ್ಪರ್ಧಿಸಿದ 6 ಜನ ವಿದ್ಯಾರ್ಥಿಗಳು ವಿಜೇತರಾಗಿದ್ದು, 2024 ರಲ್ಲಿ ಜರುಗಲಿರುವ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಶಿವಾನಂದ ಲಾಯನ್ನವರ, ವಿಜಯಕುಮಾರ ಶಿರಬೂರ ಹಾಗೂ ಏಕನಾಥ ದಿವಟಗಿ 9ನೇ ಸ್ಥಾನ ಪಡೆದುಕೊಂಡಿದ್ದು ಮಹಿಳೆಯರ ವಿಬಾಗದಲ್ಲಿ ಅನುಪಮಾ ಕೆರಕಲಮಟ್ಟಿ, ಪ್ರಿಯಾಂಕ ಚಂದರಗಿ ಮತ್ತು ಗೀತಾ ಮುರಡಿ 6ನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಬಿ.ವ್ಹಿ.ವ್ಹಿ. ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಸಿ. ಚರಂತಿಮಠ, ಬಿ.ವ್ಹಿ.ವ್ಹಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್. ಸೂಳಿಭಾವಿ, ಆಡಳಿತಾಧಿಕಾರಿಗಳಾದ ವ್ಹಿ.ಆರ್. ಶಿರೋಳ, ಪದನಿಮಿತ್ತ ಕಾರ್ಯದರ್ಶಿಗಳಾದ ಡಾ.ಎಸ್.ಎಮ್. ಗಾಂವಕರ್, ಪ್ರಾಚಾರ್ಯ ಪ್ರೊ.ಎಸ್. ಎಸ್. ಬಿರಾದಾರ ಹಾಗೂ ಮಹಾವಿದ್ಯಾಲಯದ ಬೋಧಕ/ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.


