ಬೆಂಗಳೂರು: ಹಿರಿಯ ನಾಗರೀಕನ ಮೇಲೆ ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ನಗರದ ಗಿರಿನಗರದಲ್ಲಿ ನಡೆದಿದೆ. ಸಿಂಗಾರ ವೇಲು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಧರ್ಮ ಕೃತ್ಯದ ನಂತರ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ.
ಘಟನೆಯಲ್ಲಿ ಸಿಂಗಾರ ವೇಲು ಅವರ ತುಟಿ ಹರಿದು ಹೋಗಿದ್ದು, ಆಸ್ಪತ್ರೆಗೆ ದಾಖಲಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಡಿಸೆಂಬರ್ 29 ರ ರಾತ್ರಿ 8:30 ರ ಸುಮಾರಿಗೆ ನಡೆದ ಘಟನೆ ಇದು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಠಾಣಾ ಪೊಲೀಸರು ಆರೋಪಿ ಧರ್ಮನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.


