ಬೆಳಗಾವಿ: ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗೆ ಜಿಲ್ಲಾ ಮಟ್ಟದ ಜಾಗೃತ ಸಮಾವೇಶವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳಗಾವಿ ನಗರದ ಕುಮಾರ ದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರೋ.ಕೆ.ಡಿ ಮಂತ್ರೇಶಿ ಸಂವಿಧಾನ ಪ್ರತಿಯೊಬ್ಬ ನಾಗರೀಕನ ರಕ್ಷಣೆಗಾಗಿ ನಿಂತಿದೆ. ಸಂವಿಧಾನ ರಚನೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾಜ ಬದುಕುವ ದಾರಿಯನ್ನು ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಮಲ್ಲೇಶ್ ಚೌಗುಲೆ ಅವರು, ಸಂವಿಧಾನದ ರಚನೆಗಾಗಿ ನಾವೆಲ್ಲರು ಸೇರಿದ್ದೇವೆ. ಇದು ದಲಿತ ಸಂಘಟನೆಗಳಿಗೆ ಹಾಗೆ ಮಾತ್ರ ಸೀಮಿತವಲ್ಲ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕರ್ನಾಟಕದಲ್ಲಿ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕರಾದ ರಾಜು ಸೆಟ ಮಾತನಾಡಿ ಸಂವಿಧಾನ ಪ್ರತಿಯೊಬ್ಬರ ಜವಾಬ್ದಾರಿ ಶ್ರೀಮಂತ ಬಡವ ಎನ್ನದೆ ಸಮಾನತೆಯ ಪ್ರತೀಕವಾಗಿದೆ. ಪ್ರತಿಯೊಬ್ಬರು ಆತ್ಮ ಸನ್ಮಾನ ಮತ್ತು ಸ್ವಾಭಿಮಾನವನ್ನು ಸಂರಕ್ಷಿಸುವ ಸಂವಿಧಾನ ನಮ್ಮದಾಗಿದೆ ಎಂದರು.
ಭಾರತೀಯ ಸರ್ವಭೌಮತ ಜಾತ್ಯಾತೀತ ಮತ್ತು ಸೌಹಾರ್ದ ಹಾಗೂ ಸಹಬಾಳ್ವೆ ಮಾನವೀಯ ಮೌಲ್ಯಗಳು ಬಿತ್ತುತ್ತ, ದೇಶವನ್ನು ಕಟ್ಟುತ್ತಿರುವ ದಲಿತ ಹಿಂದುಳಿದ ಅಲ್ಪಸಂಖ್ಯಾತ ಕೂಲಿಕಾರ್ಮಿಕರ ಮೇಲೆ, ಕೋಮುವಾದಿಗಳು ನಡೆಸುತ್ತಿರುವ ದೌರ್ಜನ್ಯ ಮಿತಿಮೀರಿದೆ.
10% ಮೀಸಲಾತಿ ನೀಡುವ ಮೂಲಕ ಸಂವಿಧಾನದ ಉದ್ದೇಶವನ್ನು ಬುಡಮೇಲು ಮಾಡಲಾಗಿದೆ. ಬಾಬಾ ಸಾಹೇಬ್ರ ಹೋರಾಟ ಮತ್ತು ಚಿಂತನೆ ಎಚ್ಚೆತ್ತುಕೊಳ್ಳುತ್ತಿರುವ ದಲಿತ ಸಮುದಾಯ, ನಡೆದ ಸಂವಿಧಾನದ ಬದಲಾಯಿಸುವ ಕಷ್ಟ ಏನೆನ್ನುವುದನ್ನು ಅರ್ಥ ಮಾಡಿಕೊಂಡಿರುವ ಕೋಮುವಾದಿಗಳು ಸಂವಿಧಾನದ ಆಶಯಗಳನ್ನು ಬುಡ ಮೇಲು ಮಾಡವ ಮೂಲಕ ಸಂವಿಧಾನವನ್ನು ಅಪ್ರಸ್ತುತ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಜೊತೆಗೆ ಹೊಸ ಆರ್ಥಿಕ ನೀತಿಗಳನ್ನು ಬಂಡವಾಳ ಶಾಹಿಗಳ ಹಿಡಿತ ಸಾಧಿಸುತ್ತೇವೆ. ಹೀಗಾಗಿ ಮೀಸಲಾತಿ ಅಂತ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ದಕ್ಕೆ ಉಂಟಾಗುತ್ತದೆ. ಹೀಗೆ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಕೇಂದ್ರ ಸರ್ಕಾರ ಅಧಿಕಾರ ಬಂದಾಗದಿಂದ ನಡೆಸುತ್ತಲೇ ಇದೆ ಎಂದು ಸಮುದಾಯವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು ಆಸಿಫ್ ಸೆಟ್, ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಪಾಟೀಲ್, ಹಿರಿಯ ದಲಿತ ಮುಖಂಡರಾದ ಮಲ್ಲೇಶ್ ಚೌಗುಲೆ, ರಾಜ್ಯ ಸಂಘಟನಾ ಸಂಚಾಲಕ ಸಿದ್ದಪ್ಪ ಕಾಂಬಳೆ, ರಾಜ್ಯ ಸಮಿತಿ ಸದಸ್ಯರು ಸುರೇಶ್ ತಳವಾರ್, ಜಿಲ್ಲಾ ಪ್ರಧಾನ ಸಂಚಾಲಕರು ಮಹಾಂತೇಶ್ ತಳವಾರ್, ರಾಜ್ಯ ಸಂಘಟನಾ ಸಂಚಾಲಕ ಗೌತಮ್ ಪಾಟೀಲ್ ಅರ್ಜುನ್ ಗೋಬರ್ ಸಂಚಾಲಕ ನಾಗಣ್ಣ ಬಡಿಗೇರ್, ಜಿಲ್ಲಾ ಸಂಘಟನಾ ಸಂಚಾಲಕರು ಶ್ರೀ ಅರ್ಜಿ ಕಾಂಬಳೆ, ಶಶಿ ಸಾಳವಿ ರಮೇಶ್ ಎಸ್ ಕಚೇರಿಕಾರ್ ಸಂತೋಷ್ ಕಾಂಬಳೆ, ಮನೋಹರ್ ಅಜ್ಜನರ ಮಾರುತಿ ಕಾಂಬಳೆ, ಬೆಳಗಾವಿ ಸಿಟಿ ಸಂಚಾಲಕ ಸಂತೋಷ ಗೋಬಚಿ ಇತರರು ಉಪಸ್ಥಿತರಿದ್ದರು.


