ನೋಯ್ಡಾ: ವ್ಯಕ್ತಿಯೊಬ್ಬನನ್ನು ಇಬ್ಬರು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದು ಹತ್ಯೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಹಳೆಯ ವೈಷಮ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯನ್ನು ಹತ್ಯೆ ಮಾಡಿದ್ದಲ್ಲದೆ ದೇಹವನ್ನು ಬೈಕ್ ಗೆ ಕಟ್ಟಿ ಕಿಲೋಮೀಟರ್ ಗಳವರೆಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ.
ನೋಯ್ಡಾದ ಬರೋಲಾದಲ್ಲಿ ಅನುಜ್ ಮತ್ತು ಅವರ ಸೋದರ ಸಂಬಂಧಿ ನಿತಿನ್ ಅವರು ಮೆಹಂದಿ ಹಾಸನ್ಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಅವರ ಕಾಲನ್ನು ಬೈಕ್ಗೆ ಕಟ್ಟಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದರು. ಕೆಲವು ವರ್ಷಗಳ ಹಿಂದೆ ಮೆಹೆಂದಿ ಹಸನ್ ಅನುಜ್ ತಂದೆಯ ಮೇಲೆ ಹಲ್ಲೆ ನಡೆಸಿದ್ದ ಮತ್ತು ದಾಳಿಗೆ ಸೇಡು ತೀರಿಸಿಕೊಳ್ಳಲು ಆತ ಬಯಸಿದ್ದಾಗಿ ಎಂದು ಹಂತಕರು ಪೊಲೀಸರಿಗೆ ತಿಳಿಸಿದ್ದಾರೆ.


