ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ತುಮಕೂರು ಕ್ಷೇತ್ರದಿಂದ ನನ್ನ ಹೆಸರು ಅಂತಿಮವಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಒಂದು ಹೈಕಮಾಂಡ್ ನಾಯಕರು ನನಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಯಲು ಸೂಚನೆ ಕೊಟ್ಟರೇ, ನಾನು ಸ್ಪರ್ಧೆಗೆ ರೆಡಿ ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಮಾಧ್ಯಮದವರು ಚುನಾವಣೆಯಲ್ಲಿನ ಸ್ಪರ್ಧೆ ಬಗ್ಗೆ ಕೇಳುತ್ತಿದ್ರು. ತುಮಕೂರಿಗೆ ನನ್ನ ಹೆಸರು ಅಂತಿಮವಾಗಿದೆ. ನಾಯಕರು ಸೂಚನೆ ಕೊಟ್ರೆ ಸ್ಪರ್ಧೆ ಎಂದಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿದ್ದು ನನಗೆ ಅತೀವ ಸಂತಸ ತಂದಿದೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ ರಾಜಕಾರಣಿ ಎನ್ನುವುದಕ್ಕಿಂತ ನನಗೆ ಒಳ್ಳೆಯ ಸ್ನೇಹಿತ. ಅವರು ಪಕ್ಷಕ್ಕೆ ಬಂದಿರುವುದು ಆನೆ ಬಲ ಬಂದಂತಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಮುಂದೆ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಆಯ್ಕೆಯಾಗಿ ಬಂದು ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಬೇಕೆಂದು ಸೋಮಣ್ಣ ಆಶಿಸಿದ್ದಾರೆ.


