ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ರಾಮ ಜಾನಕಿ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ. ದೇವಸ್ಥಾನದ ಗೋಡೆಗಳ ಮೇಲೆ ಅಪರಿಚಿತರು ಬೆದರಿಕೆ ಪೋಸ್ಟರ್ ಗಳನ್ನು ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಬೆಳಗ್ಗೆ ದೇವಸ್ಥಾನಕ್ಕೆ ಬಂದವರಿಗೆ ಬೆದರಿಕೆ ಸಂದೇಶಗಳಿರುವ ಪೋಸ್ಟರ್ ಗಳು ಕಂಡು ಬಂದವು. ಕೆಲವು ಪೋಸ್ಟರ್ ಗಳನ್ನು ದೇವಾಲಯದ ಗೋಡೆಗಳ ಮೇಲೆ ಅಂಟಿಸಲಾಗಿದೆ, ಉಳಿದವು ದೇವಾಲಯದ ಆವರಣದ ಸುತ್ತಲೂ ಅಂಟಿಸಿದ್ದಾರೆ. ‘ರಾಮ ಜಾನಕಿ’ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಬಿಜೆಪಿ ನಾಯಕ ರೋಹಿತ್ ಸಾಹು ಅವರಿಗೂ ಬೆದರಿಕೆ ಪತ್ರ ಬಂದಿದೆ.
ದೇವಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪೋಸ್ಟರ್ ಗಳನ್ನು ತೆಗೆದಿದ್ದಾರೆ. ದೇವಸ್ಥಾನದ ಸುತ್ತ ಭದ್ರತೆ ಏರ್ಪಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಿಸಿಟಿವಿ ಆಧರಿಸಿ ತನಿಖೆ ನಡೆಯುತ್ತಿದೆ. ಆರೋಪಿಯನ್ನು ಪೊಲೀಸರು ಶೀಘ್ರ ಪತ್ತೆ ಹಚ್ಚಲಿದ್ದಾರೆ ಎಂದು ವರದಿಯಾಗಿದೆ.


