ತುಮಕೂರು: ಕರೀಕೆರೆ ಗ್ರಾಮದಲ್ಲಿ ರೈತರೊಬ್ಬರ ಶೆಡ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದೆ. ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಜಾನುವಾರುಗಳು ಸಜೀವ ದಹನಗೊಂಡಿದ್ದು, ರೈತ ನಂದೀಶಯ್ಯ ಎನ್ನುವವರಿಗೆ ಸೇರಿದ ಹಳ್ಳಿಕಾರ್ ತಳಿಯ ಜೋಡಿ ಎತ್ತು, ಒಂದು ಸೀಮೆ ಹಸು ಮತ್ತು ಕರು ಸಜೀವ ದಹನಗೊಂಡಿವೆ ಎನ್ನಲಾಗಿದೆ.
ಶೆಡ್ ಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ, ಶೆಡ್ ನಲ್ಲಿ ಇದ್ದ 10 ಸಾವಿರ ಕೊಬ್ಬರಿ ಸಂಪೂರ್ಣ ಭಸ್ಮವಾಗಿದೆ. ರೈತ ನಂದೀಶಯ್ಯಗೆ ಸುಮಾರು 8 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ನೊಣವಿನಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಸಂಪೂರ್ಣ ಸುಟ್ಟು ಹೋದ ಶೆಡ್, ಅದರಲ್ಲಿ ಸುಟ್ಟು ಕರಕಲಾದ ಪ್ರಾಣಿಗಳ ದೇಹಗಳು ಯಾರದೂ ಮನ ಕಲಕುವಂತಿದೆ.


