ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್.ಎ ರಾಮದಾಸ್ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಎಸ್ ಎ ರಾಮದಾಸ್, ಎನ್ ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಟಿಕೆಟ್ ನೀಡುವ ವೇಳೆ ಎಲ್ಲಾ ಅಂಶವನ್ನ ಪಕ್ಷ ಗಮನಿಸುತ್ತದೆ. ಗೆಲುವು ಒಂದೇ ಮಾನದಂಡ.
ಮಾಧ್ಯಮಗಳಿಗೆ ಇರುವ ಮಾಹಿತಿ ಪ್ರಕಾರ ನೀವು ಚರ್ಚೆ ಮಾಡುತ್ತೀರಾ ಟಿಕೆಟ್ ನೀಡುವ ಕುರಿತು ಯಾವುದೇ ಸಭೆ ನಡೆದಿಲ್ಲ. ನಮ್ಮ ಬಳಿ ಯಾವುದೇ ಮಾಹಿತಿ ಕೇಳಿಲ್ಲ ಎಂದರು.
ಫೆಬ್ರವರಿ 5ರ ಬಳಿಕ ನಾಲ್ಕು ಕ್ಷೇತ್ರಗಳಿಗೂ ತೆರಳುತ್ತೇನೆ. ಕಾರ್ಯಕರ್ತರು, ಮುಖಂಡರು ನೀಡುವ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಿಳಿಸುತ್ತೇವೆ. ಟಿಕೆಟ್ ನೀಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಎಸ್.ಎ. ರಾಮದಾಸ್ ತಿಳಿಸಿದರು.


