ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 7 ರಂದು ಕರೆ ನೀಡಿರುವ ಬಂದ್ ಗೆ ಬೆಂಬಲಿಸದಿರಲು ವರ್ತಕರು, ಆಟೋ ಚಾಲಕರು ನಿರ್ಧಾರ ಮಾಡಿದ್ದಾರೆ.
ಫೆಬ್ರವರಿ 7 ರಂದು ಸಮಾನ ಮನಸ್ಕರ ವೇದಿಕೆ ಮಂಡ್ಯ ಬಂದ್ ಗೆ ಕರೆ ನೀಡಿದರೆ, ಎರಡು ದಿನಗಳ ನಂತರ ಫೆಬ್ರವರಿ 9 ರಂದು ಬಜರಂಗದಳ ಕೂಡ ಬಂದ್ ಗೆ ಕರೆ ನೀಡಿವೆ. ಆದರೆ ಬಂದ್ ಬೆಂಬಲಿಸರದಿರಲು ಆಟೋ ಚಾಲಕರು ಹಾಗೂ ವರ್ತಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಹಲವು ದಿನಗಳ ಹಿಂದೆ ಕರಗೋಡಿನಲ್ಲಿ ಹನುಮಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಬಾವುಟ ಹಾರಾಟ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧಿಸಿ ಪ್ರತಿಭಟನೆ ಹಾಗೂ ಪಾದಯಾತ್ರೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಕೂಡ ನಡೆದಿತ್ತು.


