ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಟಿಪ್ಪು ಬಡಾವಣೆಯ ಅಂಗಡಿ ಮುಂದೆ ನಡು ರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ. ಜಾಬೀರ್ ಪಾಷ ಅಲಿಯಾಸ್ ನೇಪಾಳ್(26) ಕೊಲೆಯಾದ ವ್ಯಕ್ತಿ. ಮುಕ್ತಿಯಾರ್ ಪಾಷಾ ಆರೋಪಿಯಾಗಿದ್ದಾನೆ.
ಆರೋಪಿ ಮುಕ್ತಿಯಾರ್ ಪಾಷಾ ಮತ್ತು ಜಾಬೀರ್ ನಡುವೆ ಯಾವುದೋ ವೈಯಕ್ತಿಕ ದ್ವೇಷ ಇತ್ತು. ಪರಿಣಾಮ ಆತ ಮಧ್ಯರಾತ್ರಿ ನಡು ರಸ್ತೆಯಲ್ಲಿ ಜಾಬೀರ್ ನನ್ನು ದಾರುಣವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮಧ್ಯರಾತ್ರಿಯೇ ಪೊಲೀಸ್ ಠಾಣೆಗೆ ಹೋಗಿ ತಾನು ಕೊಲೆ ಮಾಡಿರುವುದಾಗಿ ಹೇಳಿ ಠಾಣೆಯಲ್ಲಿ ಶರಣಾಗಿದ್ದಾನೆ. ಘಟನೆ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


