ಫೈರ್ ಸೇಫ್ಟಿ ನವೀಕರಣ ವಿಚಾರದಲ್ಲಿ ಖಾಸಗಿ ಶಾಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ 10 ಸಾವಿರ ಶಾಲೆಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ಶಾಲೆ ಗಳ ಟ್ಯಾಕ್ಸ್ ನ್ನು 100% ರಷ್ಟು ಏರಿಕೆ ಮಾಡಿತು. ಕೋರ್ಟ್‌ನಲ್ಲಿ ತಿರ್ಮಾನ ಆಗಿ ಅದನ್ನ 25% ಗೆ ಇಳಿಸಲಾಯ್ತು. ಪಾಲಿಕೆಯಿಂದ ಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದ್ದು, ಕೋಟ್ಯಾಂತರ ರೂ. ಅನ್ನು ಖಾಸಗಿ ಶಾಲೆಗಳಿಂದ ಲೂಟಿ ಮಾಡಲಾಗುತ್ತಿದೆ ಎಂದರು.
ಖಾಸಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಿಎಂ ಹಾಗೂ ಡಿಸಿಎಂ ಅವಕಾಶ ನೀಡಬೇಕು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮ್ಯಸೆಗಳಿಗೆ ಅಧಿಕಾರಿಗಳು, ಸರ್ಕಾರ ಧನಿಯಾಗಬೇಕು. ಫೈರ್ ಸೆಫ್ಟಿ, ಲ್ಯಾಂಡ್ ಕರ್ನವರ್ಶನ್, ಟ್ಯಾಕ್ಸ್, ಸೇರಿದಂತೆ ಹಲವು ವಿಚಾರದ ಸಮ್ಯಸೆ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಪಾಲಿಕೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದ್ದು, ಖಾಸಗಿ ಶಾಲೆಗಳ ಮೇಲೆ ಹೇರಲಾಗಿರುವ ಹಲವು ನಿಯಮಗಳು ಸರಿ ಪಡಿಸಬೇಕು ಎಂದು ತಿಳಿಸಿದರು.


