ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಬಂದ ಮಹಿಳೆಯೊಬ್ಬಳು ವೈದ್ಯರೊಬ್ಬರಿಗೆ ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ವಿಜಯನಗರದಲ್ಲಿ ನಡೆದಿದೆ. ಡಾ. ಗಿರೀಶ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಐಶ್ವರ್ಯಾ ಗೌಡ ಎಂಬ ಮಹಿಳೆಯ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಡಾ. ಗಿರೀಶ್ ಬಳಿ ಸೌಂದರ್ಯವರ್ಧಕ ಚಿಕಿತ್ಸೆಗಾಗಿ ಬಂದಿದ್ದ ಐಶ್ವರ್ಯಾ ಗೌಡ ಕ್ರಮೇಣ ಅವರಿಗೆ ಆಪ್ತಳಾಗಿದ್ದಳು. ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ ಎಂದು ಬೂಸಿ ಬಿಟ್ಟಿದ್ದ ಐಶ್ವರ್ಯಾ ತನ್ನ ಪ್ರಭಾವ ಬಳಸಿ ದುಬಾರಿ ಐಷಾರಾಮಿ ಕಾರ್ ನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ಆಮಿಷ ತೋರಿದ್ದಳು. ಹಂತಹಂತವಾಗಿ ಅವರಿಂದ 6 ಕೋಟಿ ರೂ. ವಸೂಲಿ ಮಾಡಿದ್ದಳು.
ಐಶ್ವರ್ಯಾ ವಂಚನೆ ಅರಿವಾದ ಬಳಿಕ ಹಣ ಕೇಳಿದ್ದಕ್ಕೆ ಅವರ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರೆಂದು ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು. ಇತ್ತ ಕಾರೂ ಇಲ್ಲದೆ, ಕಾಸೂ ಇಲ್ಲದೆ ವೈದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಐಶ್ವರ್ಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.


