nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆದಿಶಕ್ತಿ ದೇವತೆಗಳ ಪವಾಡ ರಾಜ್ಯದ ಗಮನ ಸೆಳೆದಿದೆ: ಶಶಾಂಕ್‌ ರಾಜ್

    March 8, 2026

    ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಶಾರದಾ ಪೂಜೆ ಅತ್ಯಂತ ಮಂಗಳಕರ: ಮುಖ್ಯ ಶಿಕ್ಷಕಿ ಮಂಜುಳ

    March 8, 2026

    ತುಮಕೂರು: ನಾಗವಲ್ಲಿ ಸಮೀಪ ಮರಕ್ಕೆ ಲಾರಿ ಡಿಕ್ಕಿ: ಕೇರಳದ ಇಬ್ಬರು ಸಾವು

    March 8, 2026
    Facebook Twitter Instagram
    ಟ್ರೆಂಡಿಂಗ್
    • ಆದಿಶಕ್ತಿ ದೇವತೆಗಳ ಪವಾಡ ರಾಜ್ಯದ ಗಮನ ಸೆಳೆದಿದೆ: ಶಶಾಂಕ್‌ ರಾಜ್
    • ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಶಾರದಾ ಪೂಜೆ ಅತ್ಯಂತ ಮಂಗಳಕರ: ಮುಖ್ಯ ಶಿಕ್ಷಕಿ ಮಂಜುಳ
    • ತುಮಕೂರು: ನಾಗವಲ್ಲಿ ಸಮೀಪ ಮರಕ್ಕೆ ಲಾರಿ ಡಿಕ್ಕಿ: ಕೇರಳದ ಇಬ್ಬರು ಸಾವು
    • ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ
    • ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ
    • ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ
    • ಸಾರಿಗೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ: 2,000 ಕೋಟಿ ರೂ. ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್‌ ಗಳ ಸೇರ್ಪಡೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭೂಗಳ್ಳರ ಒತ್ತುವರಿಗೆ ಬಲಿಯಾದ ಚಿಕ್ಕಾವಳ್ಳಿಯ ಧರ್ಮಸಾಗರ ಕೆರೆ: ಅನುದಾನ ಬಂದ್ರೂ ಅಭಿವೃದ್ಧಿ ಆಗಿಲ್ಲ!
    ರಾಜ್ಯ ಸುದ್ದಿ February 7, 2024

    ಭೂಗಳ್ಳರ ಒತ್ತುವರಿಗೆ ಬಲಿಯಾದ ಚಿಕ್ಕಾವಳ್ಳಿಯ ಧರ್ಮಸಾಗರ ಕೆರೆ: ಅನುದಾನ ಬಂದ್ರೂ ಅಭಿವೃದ್ಧಿ ಆಗಿಲ್ಲ!

    By adminFebruary 7, 2024No Comments2 Mins Read
    korategere

    ಕೊರಟಗೆರೆ: 250 ವರ್ಷಗಳ ಇತಿಹಾಸ ಇರುವ ಕೊರಟಗೆರೆಯ ಧರ್ಮಸಾಗರ ಕೆರೆಗೆ 426 ಎಕರೆ ಭೂ ವಿಸ್ತೀರ್ಣವಿದೆ. ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯೇ ಕೊರಟಗೆರೆಯಲ್ಲಿ ಇಲ್ಲ, ಸ್ಥಳೀಯ ಕ್ಯಾಮೇನಹಳ್ಳಿ ಗ್ರಾಪಂಗೆ ಕೆರೆಯ ರಕ್ಷಣೆ ಮತ್ತು ಅಭಿವೃದ್ದಿಯ ಕಾಳಜಿಯು ಇಲ್ಲದೇ ಭೂಗಳ್ಳರ ಹಾವಳಿಗೆ ಕೆರೆಯು ಬಲಿಯಾಗಿ ಅಂತರ್ಜಲ ಮಟ್ಟವು ಮತ್ತೇ ಪಾತಾಳಕ್ಕೆ ಕುಸಿದಿದೆ.

    ಜಯಮಂಗಲಿ ನದಿಪಾತ್ರದ ತೀತಾ ಜಲಾಶಯವು ಕಳೆದ ವರ್ಷ ಕೋಡಿಬಿದ್ದು ಧರ್ಮಸಾಗರ ಕೆರೆಯು ತುಂಬಿದ ವರ್ಷವೇ ಖಾಲಿಯಾಗಿದೆ. ಕೆರೆಯ ಹಿಂಭಾಗದ 95 ಗ್ರಾಮದ ಅಂತರ್ಜಲ ಮಟ್ಟ ಸುಧಾರಣೆಗೆ ಮತ್ತೆ ಪೆಟ್ಟುಬಿದ್ದಿದೆ. ತೀತಾ ಜಲಾಶಯದ ಬಲದಂಡೆ ನಾಲೆಯಿಂದ ವೆಂಕಟಾಪುರ, ಕಂಬದಹಳ್ಳಿ, ಕೋಡ್ಲಹಳ್ಳಿ ಮಾರ್ಗದ ಕಾಲುವೆಗೆ ಕಲ್ಲು-ಮಣ್ಣು ಹಾಕಿ ಮುಚ್ಚಿರುವ ಹಿನ್ನಲೆ ನೂರಾರು ರೈತರಿಗೆ ಸಂಕಷ್ಟ. ಮೀನುಗಾರಿಕೆ ಇಲಾಖೆಯು ಲಾಭಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿಗೆ ಸರಕಾರ ಪ್ರಮುಖ ಆದ್ಯತೆ ನೀಡಬೇಕಿದೆ.


    Provided by
    Provided by

    138 ಎಕರೆಯ ದಾಖಲೆಯೇ ಇಲ್ಲ:

    ಧರ್ಮಸಾಗರ ಕೆರೆಯು ಮಾಳೇನಹಳ್ಳಿ ಸರ್ವೆ.15ರಲ್ಲಿ 31 ಎಕರೆ, ಟಿ.ವೆಂಕಟಾಪುರ ಸರ್ವೆ ನಂ.25 ರಲ್ಲಿ 108 ಎಕರೆ, ಕೆ.ಜಿ. ಕಂಬದಹಳ್ಳಿ ಸರ್ವೆ ನಂ.6ರಲ್ಲಿ 29 ಎಕರೆ, ತುಂಬುಗಾನಹಳ್ಳಿ ಸರ್ವೆ ನಂ.13ರಲ್ಲಿ 89 ಎಕರೆ, ಚಿಕ್ಕಾವಳ್ಳಿ ಸರ್ವೆ ನಂ.84ರಲ್ಲಿ 28 ಎಕರೆ ಸೇರಿ 6 ಗ್ರಾಮದ 288 ಎಕರೆಯ ದಾಖಲೆ ಕಂದಾಯ ಬಳಿಯಿದೆ. ಧರ್ಮಸಾಗರ ಕೆರೆಯ ಇನ್ನೂಳಿದ 138 ಎಕರೆ ಭೂ ವಿಸ್ತೀರ್ಣದ ದಾಖಲೆಯು ಕಂದಾಯ, ಗ್ರಾ.ಪಂ., ಹೇಮಾವತಿ ಮತ್ತು ಸಣ್ಣ ನೀರಾವರಿ ಇಲಾಖೆಯ ಬಳಿಯು ಲಭ್ಯವಿಲ್ಲ.

    ಅನುದಾನ ಬರುತ್ತೆ ಅಭಿವೃದ್ದಿ ಆಗಿಲ್ಲ:

    ಜಯಮಂಗಲಿ ನದಿ ಪಾತ್ರದ ಧರ್ಮಸಾಗರ ಕೆರೆಯು ತುಂಬಿ ಹರಿದರೇ 95 ಗ್ರಾಮದ ರೈತರಿಗೆ ಅಂತರ್ಜಲದ ವರದಾನವಾಗಲಿದೆ. ಸಣ್ಣ ನೀರಾವರಿ ಮತ್ತು ಕ್ಯಾಮೇನಹಳ್ಳಿ ಗ್ರಾಪಂಯಿಂದ ಕೆರೆಯ ಅಭಿವೃದ್ದಿ ಶೂನ್ಯ. ಸರಕಾರದಿಂದ ಪ್ರತಿವರ್ಷವು ಅನುದಾನ ಬರುತ್ತೇ ಅಷ್ಟೇ, ಆದರೇ ಕಾಮಗಾರಿ ಆಗೋದೇ ಗೊತ್ತಾಗಲ್ಲ. ಇನ್ನೂ ನರೇಗಾ ಕಾಮಗಾರಿಯು ಗ್ರಾಪಂ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಮಾಡ್ತಾರೇ. 250 ಎಕರೇ ವಿಸ್ತೀರ್ಣದಲ್ಲಿ ಸೀಮೆಜಾಲಿಯ ಮರಗಳು ಬಿಟ್ಟರೇ ಅಭಿವೃದ್ದಿಯು ಶೂನ್ಯವಾಗಿದೆ.

    ಭೂಗಳ್ಳರ ಹಾವಳಿಗೆ ಗಿಡಗಳ ನಾಶ:

    ಪರಿಸರ ಮತ್ತು ಅಂತರ್ಜಲ ರಕ್ಷಣೆಗಾಗಿ ಸಾಮಾಜಿಕ ವಲಯ ಅರಣ್ಯದಿಂದ ಕಳೆದ 10 ವರ್ಷಗಳಿಂದ ಸಂರಕ್ಷಣೆ ಮಾಡಿದ್ದ 1500 ಕ್ಕೂ ಹೆಚ್ಚು ಹರ್ಕ್ಯೂಲೇಸ್, ಸೀಮೆತುಂಗಡಿ, ಹೊಂಗೆ ಮರಗಳು ಭೂಗಳ್ಳರ ಹಾವಳಿಯಿಂದ ರಾತ್ರೋರಾತ್ರಿ ಕರಗಿವೆ. ಲಕ್ಷಾಂತರ ರೂ ಬೆಲೆಬಾಳುವ ಮರಗಿಡ ನಾಶ ಆಗಿರುವ ಮಾಹಿತಿಯೇ ಗ್ರಾಪಂ ಮತ್ತು ಅರಣ್ಯ ಇಲಾಖೆಗೂ ಗೋತ್ತಿಲ್ಲ. ಬೆಂಗಳೂರಿನ ಭೂಗಳ್ಳರಿಗೆ ಅಧಿಕಾರಿ ವರ್ಗದ ಮೌನದ ಶ್ರೀರಕ್ಷೆಯು ಅರಣ್ಯ ನಾಶಕ್ಕೆ ಬಲನೀಡಿದೆ.

    ಸರ್ವೆಗೆ ತಹಶೀಲ್ದಾರ್ ಖಡಕ್ ಆದೇಶ:

    ರೈತಸಂಘ ಕಳೆದ 10 ವರ್ಷದಿಂದ ಧರ್ಮಸಾಗರ ಕೆರೆಯ ಸರ್ವೆಗೆ ಮನವಿ ಮಾಡಿದ್ರು ಪ್ರಯೋಜನಾ ಆಗಿರಲಿಲ್ಲ. ರೈತಸಂಘದ ದೂರಿನ ಅನ್ವಯ ಕೊರಟಗೆರೆ ತಹಶೀಲ್ದಾರ್ ಮಂಜುನಾಥ ಕೆ., ರೈತರ ಜೊತೆಗೂಡಿ ಕೆರೆಯ ನಾಲ್ಕುದಿಕ್ಕಿನ ಮಾಹಿತಿ ಕಲೆಹಾಕಿದ್ದಾರೆ. ಕೆರೆಯ ಭೂಮಿ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡಿಸ್ತೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ಕೆರೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಿರುವ ಘಟನೆ ನಡೆದಿದೆ.

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    admin
    • Website

    Related Posts

    ಸಾರಿಗೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ: 2,000 ಕೋಟಿ ರೂ. ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್‌ ಗಳ ಸೇರ್ಪಡೆ

    March 7, 2026

    ಸಾಲವಿಲ್ಲದೆ ಯಾವುದೇ ದೇಶ–ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ; ಟೀಕಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ: ಸಿಎಂ ಸಿದ್ದರಾಮಯ್ಯ ತಿರುಗೇಟು

    March 7, 2026

    ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ; 45,000 ಕೋಟಿ ಗುರಿ!

    March 6, 2026

    Comments are closed.

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಆದಿಶಕ್ತಿ ದೇವತೆಗಳ ಪವಾಡ ರಾಜ್ಯದ ಗಮನ ಸೆಳೆದಿದೆ: ಶಶಾಂಕ್‌ ರಾಜ್

    March 8, 2026

    ಕೊರಟಗೆರೆ: ಚಿಕ್ಕನಹಳ್ಳಿ ಒಂದು ಕುಗ್ರಾಮ, ಮಹಾಶಕ್ತಿ ಮತ್ತು ಆದಿಶಕ್ತಿ ದೇವತೆಗಳ ನೆಲೆಯಿಂದ ಗ್ರಾಮಕ್ಕೆ ವಿಶೇಷ ಕಳೆ ಬಂದಿದೆ. ತಾಯಿ ಮಹಿಮೆಗೆ…

    ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಶಾರದಾ ಪೂಜೆ ಅತ್ಯಂತ ಮಂಗಳಕರ: ಮುಖ್ಯ ಶಿಕ್ಷಕಿ ಮಂಜುಳ

    March 8, 2026

    ತುಮಕೂರು: ನಾಗವಲ್ಲಿ ಸಮೀಪ ಮರಕ್ಕೆ ಲಾರಿ ಡಿಕ್ಕಿ: ಕೇರಳದ ಇಬ್ಬರು ಸಾವು

    March 8, 2026

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.