ʼʼಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಲ್ಲಿ ಹೇಳುವುದಾದರೆ ಭಾರತ ಪ್ರಜಾಪ್ರಭುತ್ವದ ತಾಯಿ. ಯಾಕೆಂದರೆ ನಮ್ಮ ಈ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಇತರ ರಾಷ್ಟ್ರಗಳಿಗೆ ಮಾದರಿʼʼ ಎಂದು ಗಡ್ಕರಿ ಹೇಳಿದ್ದಾರೆ.
ʼʼರಾಜಕಾರಣಿಗಳು ಬಂದು ಹೋದರೂ ಅಂತಿಮವಾಗಿ ಅವರು ಕ್ಷೇತ್ರಗಳಲ್ಲಿ ಜನರಿಗೆ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇದರಿಂದಲೇ ಅವರಿಗೆ ತಮ್ಮ ಕ್ಷೇತ್ರದಲ್ಲಿ ಗೌರವ ಸಿಗುತ್ತದೆ. ಪ್ರಚಾರ ಮತ್ತು ಜನಪ್ರಿಯತೆ ಬೇಕು. ಅವರು ಸಂಸತ್ತಿನಲ್ಲಿ ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಆಯಾ ಕ್ಷೇತ್ರದ ಜನರಿಗಾಗಿ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಮುಖ್ಯವಾಗುತ್ತದೆʼʼ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಪ್ರದರ್ಶನ ತೋರುವ ಸಂಸದರಿಗೆ ಕೊಡ ಮಾಡುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಡ್ಕರಿ ಮಾತನಾಡಿದ ಅವರುʼʼ ನಾನು ಯಾವತ್ತೂ ತಮಾಷೆಗೆ ಹೇಳುತ್ತಿರುತ್ತೇನೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಎಂದಿಗೂ ಅರ್ಹವಾದ ಗೌರವ ಸಿಗುವುದಿಲ್ಲ ಮತ್ತು ಕೆಟ್ಟ ಕೆಲಸ ಮಾಡುವವರಿಗೆ ಎಂದಿಗೂ ಶಿಕ್ಷೆಯಾಗುವುದಿಲ್ಲ, ಚರ್ಚೆ, ವಾದ-ವಿವಾದಗಳಲ್ಲಿ ಮೂಡಿಬರುವ ವಿಭಿನ್ನ ಅಭಿಪ್ರಾಯಗಳಿಂದ ಸಮಸ್ಯೆಯಾಗುವುದಿಲ್ಲ. ಆದರೆ ವಿಭಿನ್ನ ಆಯೋಚನೆಗಳು ಮೂಡಿ ಬರದೇ ಇರುವುದು ಮುಖ್ಯ ಸಮಸ್ಯೆ.


