ಧಾರವಾಡ: ವಿಶೇಷಚೇತನ ಮಗಳು ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳೆಂದು ಹೆತ್ತ ತಾಯಿಯೇ ಕೊಲೆ ಮಾಡಿರುವ ಘಟನೆ ಧಾರವಾಡದ ನಗರದ ಕಮಲಾಪುರ ಹೂಗಾರ ಓಣಿಯಲ್ಲಿ ಘಟನೆ ನಡೆದಿದೆ. ತಾಯಿ ಜ್ಯೋತಿ ಹಾಗೂ ಪ್ರಿಯಕರ ರಾಹುಲ್ ಸೇರಿಕೊಂಡು ಈ ಪಾಪಿ ಕೃತ್ಯ ಮಾಡಿದ್ದಾರೆ.
ಹುಬ್ಬಳ್ಳಿಯ ನವನಗರ ಮೂಲದ ರಾಹುಲ್ ಜೊತೆ ಜ್ಯೋತಿ ಅನೈತಿಕ ಸಂಬಂಧ ಹೊಂದಿದ್ದಳು, ಇದಕ್ಕೆ ಮಗಳು ಅಡ್ಡಿಯಾಗಿದ್ದಾಳೆ ಎಂದು ಪ್ರಿಯಕರ ರಾಹುಲ್ ಜೊತೆ ಸೇರಿಕೊಂಡು ಮಗಳನ್ನೇ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಘಟನೆ ಸಂಬಂಧ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.


