ಹಣ ಪಡೆದು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗದೇ ಇರುವ ಕಾರಣಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಅವರ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲು ಸೋನಾಕ್ಷಿ ಹಣ ಪಡೆದಿದ್ದರು. ಹಣ ಪಡೆದುಕೊಂಡೂ ಅವರು ಈ ದೂರಿಗೆ ಸಂಬಂಧಿಸಿದಂತೆ ಮುರಾದಾಬಾದ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
2018ರಲ್ಲಿ ಸೋನಾಕ್ಷಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದರು. ಆಯೋಜಕ ಪ್ರಮೋದ್ ಶರ್ಮಾ ಬಳಿ ಹಣ ಪಡೆದಿದ್ದರು. ಕಾರ್ಯಕ್ರಮಕ್ಕೆ ಬಾರದೇ ಇರುವ ಕಾರಣಕ್ಕಾಗಿ 2019ರಂದು ಮುರಾದಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.


