ಬಿಗ್‍ಬಾಸ್ ಸ್ಪರ್ಧಿ ತನಿಷಾಗೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಮೇಲೆ ಅಟ್ರಾಸಿಟಿ ದೂರು ದಾಖಲಾಗಿತ್ತು. ಇದೀಗ ಅಟ್ರಾಸಿಟಿ ಕೇಸ್ ನಲ್ಲಿ ತನಿಷಾಗೆ ಬಿಗ್ ರಿಲೀಫ್ ಸಿಕ್ಕಿದೆ.
ತನಿಷಾ ಬಿಗ್ ಬಾಸ್ ಶೋನಲ್ಲಿ ಪ್ರತಾಪ್ ಜೊತೆ ಸಂಭಾಷಣೆ ಮಾಡುವಾಗ ಭೋವಿ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಹಿನ್ನಲೆ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಿಡಿಯೋ ಕೊಟ್ಟಿದ್ದರು. ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಜಾತಿನಿಂದನೆ ಕೇಸ್ ಆಗಿದ್ದರಿಂದ ಡಿವೈಎಸ್ಪಿ ಪ್ರಕರಣ ತನಿಖೆ ಮಾಡಿದ್ದರು. ತನಿಷಾ ಬಿಗ್ ಬಾಸ್ ಶೋನಲ್ಲಿ ಬಳಕೆ ಮಾಡಿರೋ ಆಕ್ಷೇಪಾರ್ಹ ಪದ ಇರುವ ವಿಡಿಯೋ ಆಡಿಯೋ ಒಂದನ್ನ ಪೊಲೀಸರು ಎಫ್‍ಎಸ್‍ಎಲ್‍ಗೆ ಕಳಿಸಿಕೊಟ್ಟಿದ್ದರು. ಎರಡು ತಿಂಗಳ ಬಳಿಕ ಎಫ್‍ಎಸ್‍ಎಲ್‍ವರದಿ ತನಿಖಾಧಿಕಾರಿ ಕೈ ಸೇರಿದೆ.
ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.


