1976 ಫೆಬ್ರವರಿ 9ರಂದು ಜೀತ ಪದ್ಧತಿ ರದ್ದತಿ ಕಾನೂನು ಅಂಗೀಕಾರ ದಿನವಾಗಿದ್ದು ಇದನ್ನ ರಾಜ್ಯ ಸರ್ಕಾರ ಜೀತ ಪದ್ಧತಿ ನಿರ್ಮೂಲನಾ ದಿನವನ್ನಾಗಿ ಆಚರಿಸಲಾತ್ತಿದೆ.
ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕು ಆಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಕೃಷ್ಣರಾಜ್ ಮಾತಾನಾಡಿ, ಜೀತ ಪದ್ದತಿ ನಮ್ಮ ದೇಶದ ಅಭಿವೃದ್ಧಿ ಮಾರಕವಾದದ್ದು ಇದನ್ನ ಸಂಪೂರ್ಣವಾಗಿ ತಡೆಗಟ್ಟಲು ನಾವು ಪ್ರಾಮಾಣಿಕ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಬಿಡುಗಡೆ ಮತ್ತು ಪುನರ್ವಸತಿ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು ಹಾಗೂ ಜೀತ ನಿರ್ಮಾಲನೆಯಲ್ಲಿ ಜೀವಿಕ ಸಂಘಟನೆಯ ಪಾತ್ರ ಅತ್ಯಂತ ಶ್ಲಾಘನೀಯ ಎಂದರು.
ಜೀತ ಕಾನೂನು ಮತ್ತು ಜಾರಿ ಕುರಿತು ಮಾತಾಡಿದ ಜೀವಿಕ ರಾಜ್ಯ ಸಂ. ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ ಮಾತಾನಾಡಿ ಜೀತ ಪದ್ಧತಿ ಅತ್ಯಂತ ಘೋರ ವ್ಯವಸ್ಥೆಯಾಗಿದೆ ಮನುಷ್ಯ ಮನುಷ್ಯನನ್ನ ದುಡಿಸಿಕೊಳ್ಳುವ ಪ್ರಾಣಿಗಳಿಗಿಂತಲೂ ಹೀನಾಯವಾಗಿ ನೋಡಿಕೊಳ್ಳುವ ಅಮಾನವೀಯ ಪದ್ಧತಿಯನ್ನು 1976 ಜೀತ ಪದ್ಧತಿ ರದ್ದತಿ ಕಾನೂನಿನ ಮೂಲಕ ನಿರ್ಮಾಲನೆ ಮಾಡಲು ನಾವು ಹಗಲಿರುಳು ಶ್ರಮಿಸುವ ಅವಶ್ಯಕತೆ ಇದೆ. ಇಂದು ಜೀವಿಕ ಸಂಘಟನೆಯ ಮೂವತ್ತು ವರ್ಷಗಳ ನಿರಂತರ ಹೋರಾಟ ಫಲವಾಗಿ ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಜೀತ ಮುಕ್ತರಾಗಿದ್ದಾರೆ ಮತ್ತು ಜೀತ ನಿರ್ಮಾಲನೆಯಲ್ಲಿ ಮೈಸೂರು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಹಾಗೆ ನಾವು ಜೀತ ನಿರ್ಮೂಲನೆ ದಿನವನ್ನು ಫೆಬ್ರವರಿ 9ರ ಬದಲಾಗಿ ಆಕ್ಟೋಬರ್ 25 ರಂದು ಆಚರಿಸಬೇಕು ಯಾಕೆಂದರೆ ಜೀತ ಕಾನೂನು ಜಾರಿಯಾದ ದಿನವಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಜೀತ ಮುಕ್ತರಾಗಿ ಸ್ವತಂತ್ರ ಜೀವನ ರೂಪಿಸಿಕೊಂಡು ಜೀತ ನಿರ್ಮೂಲನೆಗೆ ಶ್ರಮಿಸುತ್ತಿರುವ ಮುಖಂಡರನ್ನ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ತಹಶಿಲ್ದಾರ ಶ್ರೀನಿವಾಸ, ಇಒ ಧರಣೇಶ್, ವೈದ್ಯಾಧಿಕಾರಿ ಡಾ.ಸೋಮಣ್ಣ, ಬಿಇಒ ಮಾರಯ್ಯ, ಟಿಎಸ್ ಡ್ಬ್ಲು ರಾಮಸ್ವಾಮಿ, ಸಿಡಿಪಿಒ ಆಶಾ, ಬಿಸಿಎಮ್ ಅಧಿಕಾರಿ ಶಶಿಕಲಾ, ರಂಗಸ್ವಾಮಿ ಜೀವಿಕ ಸಂಚಾಲಕರಾದ ಚಂದ್ರಶೇಖರ ಮೂರ್ತಿ, ಶಿವರಾಜ್, ವೆಂಕಟೇಶ ಇದ್ದರು.
ವರದಿ: ಮಲಾರ ಮಹದೇವ ಸ್ವಾಮಿ


