ಗದಗ: ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಸುಂಡಿ ಬಳಿ ಗದಗದಿಂದ ಹೊರಟಿದ್ದ ಬಸ್ ಅನ್ನು ತಡೆದ ನಾಲ್ವರು ಯುವಕರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಇದರಿಂದ ಬಸ್ ಚಾಲಕ ಸಂತೋಷ್ ಅಸೂಟಿ ಅವರಿಗೆ ಗಾಯವಾಗಿದ್ದು ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ ನ ಚಾಲಕ ಎದುರಿದ್ದ ಕಾರಿಗೆ ಸೈಡ್ ಕೊಡುವಂತೆ ಹಾರ್ನ್ ಮಾಡಿದ್ದಾನೆ. ಆದರೆ ಕಾರು ಸವಾರರು ಕಾರಿನ ಸೈಡ್ ಮಿರರ್ ಅನ್ನು ಕ್ಲೋ ಸ್ ಮಾಡಿದರು. ಇದನ್ನು ಗಮನಿಸಿದ ಬಸ್ ಚಾಲಕ ಐದಾರು ಬಾರಿ ಹಾರ್ನ್ ಮಾಡಿದ್ದರು. ಇದರಿಂದ ಕೆರಳಿದ ಯುವಕರ ಗುಂಪು ಬಸ್ ಅನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಲಕನೊಂದಿಗೆ ಜಗಳಕ್ಕೆ ಇಳಿದಿದ್ದು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


