ಗುಜರಾತ್ ನಲ್ಲಿ ಮದುವೆ ಮೆರವಣಿಗೆಯಲ್ಲಿ ದಲಿತ ವರನ ಮೇಲೆ ಕುದುರೆಯ ಮೇಲೆ ಏರಿದಕ್ಕೆ ಅಮಾನುಷವಾಗಿ ಥಳಿಸಲಾಗಿದೆ. ಗಾಂಧಿನಗರ ಜಿಲ್ಲೆಯ ಚಡಸಾನ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಿಕಾಸ್ ಚಾವ್ಡಾ ಎಂಬ ಯುವಕನನ್ನು ಅಮಾನುಷವಾಗಿ ಥಳಿಸಲಾಗಿದೆ.
ವರ ಮತ್ತು ತಂಡ ವಧುವಿನ ಮನೆಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ನಲ್ಲಿ ಬಂದ ಗುಂಪು ಯುವಕನನ್ನು ತಡೆದು ಥಳಿಸಿದ್ದಾರೆ. ಮೇಲ್ವರ್ಗಕ್ಕೆ ಸೇರಿದವರು ಮಾತ್ರ ಕುದುರೆ ಸವಾರಿ ಮಾಡಬಹುದು ಎಂದು ದಾಳಿ ನಡೆಸಲಾಗಿದೆ. ಆರೋಪಿಗಳು ಯುವಕರ ಮೇಲೆ ಜಾತಿ ನಿಂದನೆ ಮಾಡಿ ಥಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಒಬಿಸಿ ವರ್ಗಕ್ಕೆ ಸೇರಿದ ಸೈಲೇಶ್ ಠಾಕೂರ್, ಜಯೇಶ್ ಠಾಕೂರ್, ಸಮೀರ್ ಠಾಕೂರ್ ಮತ್ತು ಅಶ್ವಿನ್ ಠಾಕೂರ್ ಬಂಧಿತರು. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 504, 114 ಮತ್ತು 506 (2) ಮತ್ತು ಎಸ್‌ಸಿ/ಎಸ್ ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


