೧.ಕರ್ನಾಟಕ ಸರಕಾರ ವಿಶ್ವ ಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ನಾವಿದನ್ನು ಸಂಭ್ರಮದಿಂದ ಆಚರಿಸಬೇಕಾಗಿದೆ.
೨. ಸರಕಾರ ಆಯ್ಕೆ ಮಾಡಿದ ಭಾವಚಿತ್ರ ಅತ್ಯಂತ ಸೂಕ್ತವಾದುದು. ವಚನಗಳ ರಚನೆಯ ಮೂಲಕವೆ ಬಸವಣ್ಣನವರು ಅಭೂತಪೂರ್ವ ಕ್ರಾಂತಿ ಮಾಡಿದವರು.
೩. ಇಷ್ಟು ದಿನ ಬಸವಣ್ಣ ಬಹುತೇಕ ಮಠಗಳಿಗೆ ಬಂಡವಾಳವಾಗಿದ್ದರು. ಇದೀಗ ಬಸವಣ್ಣ ಸಾರ್ವಜನಿಕರ ಸ್ವತ್ತು.
೪. ಜಾತಿ ಮತ ಪಂಥಗಳನ್ನು ಮೀರಿ ಸಕಲ ಜೀವಾತ್ಮರಿಗೆ ಲೇಸ ಬಯಸಿದವರು ಶರಣರು.
೫. ಪ್ರಜಾಪ್ರಭುತ್ವದ ಎಲ್ಲಾ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ. ಸಂವಿಧಾನಕ್ಕಿಂತಲೂ ಹೆಚ್ಚು ಸ್ಪಂದನಾರ್ಹ ಗುಣ ವಚನಗಳಲ್ಲಿವೆ.
೬. ನೈತಿಕ, ಮಾನಸಿಕ, ಬದಲಾವಣೆಗೆ ; ವೈಚಾರಿಕ, ವೈಜ್ಞಾನಿಕ ಚಿಂತನೆಗೆ ವಚನಗಳು ಪ್ರೇರಕ ಶಕ್ತಿಯಾಗಿವೆ.
೭. ಬಸವಣ್ಣನವರೆಂದು ಇನ್ನೇನು ಅಲ್ಲ. ಅದೊಂದು ನೀಲಿ ಆಗಸ. ಅಲ್ಲಿ ಏನೂ ಇಲ್ಲ. ಅಲ್ಲಿ ಎಲ್ಲವೂ ಇವೆ. ಇರುವ- ಇಲ್ಲದರ ನಡುವೆಯೆ ನಮ್ಮ ಜೀವನವಿದೆ.
೮. ದಿ. ೧೭ ರಂದು ಸರಕಾರದ ಜೊತೆಗೆ ನಾವೂ ನಮ್ಮ ಮನೆ ಮನೆಗಳಲ್ಲಿ ಬಸವಣ್ಣನವರ ಭಾವ ಚಿತ್ರ ಇಟ್ಟುಕೊಂಡು ಸಂಭ್ರಮಿಸೋಣ.
೯. ಅಂದು ನಮ್ಮ ಮನೆಯ ಸುತ್ತ ಮುತ್ತಲ ಮಕ್ಕಳಿಗೆ ವಚನ ಕಲಿಸಿ, ಸಿಹಿಕೊಟ್ಟು ಖುಷಿಯಾಗಿ ಆಚರಿಸೋಣ
೧೦. ಬಸವ ಬೆಳಕು ಜಗದಿ ಬೆಳಗಲಿ. ಅವರ ಆಶಯಗಳನ್ನು ಬದುಕಲು ನಾವು ನೀವೆಲ್ಲ ಪಣ ತೊಡೋಣ.


