nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿಕ್ಕನಾಯಕನಹಳ್ಳಿ: ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್‌ — ಸಾರ್ವಜನಿಕರಿಗೆ ಸುವರ್ಣಾವಕಾಶ

    May 6, 2026

    ತುರ್ತು ಸಂದರ್ಭದಲ್ಲಿ ಜೀವ ರಕ್ಷಕನಾಗಲಿದ್ದಾನೆ ಸಾಮಾನ್ಯ ನಾಗರಿಕ: ‘ತಾಯಿ’ ಯೋಜನೆಗೆ ಚಾಲನೆ

    May 6, 2026

    ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು

    May 5, 2026
    Facebook Twitter Instagram
    ಟ್ರೆಂಡಿಂಗ್
    • ಚಿಕ್ಕನಾಯಕನಹಳ್ಳಿ: ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್‌ — ಸಾರ್ವಜನಿಕರಿಗೆ ಸುವರ್ಣಾವಕಾಶ
    • ತುರ್ತು ಸಂದರ್ಭದಲ್ಲಿ ಜೀವ ರಕ್ಷಕನಾಗಲಿದ್ದಾನೆ ಸಾಮಾನ್ಯ ನಾಗರಿಕ: ‘ತಾಯಿ’ ಯೋಜನೆಗೆ ಚಾಲನೆ
    • ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು
    • ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ
    • ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
    • ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ
    • ಗುಬ್ಬಿ: ಮೇ 25ರಂದು ಬಸವ ಜಯಂತಿ ಆಚರಣೆ
    • ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಾಂಗಲ್ಯ ಸರ ಕದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
    ರಾಜ್ಯ ಸುದ್ದಿ February 14, 2024

    ಮಾಂಗಲ್ಯ ಸರ ಕದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

    By adminFebruary 14, 2024No Comments2 Mins Read
    mangalya

    ಇದೀಗ ಡಿಫರೆಂಟ್ ಕೇಸ್‌ ಎಂಬಂತೆ ಎದೆನೋವು ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಟ್ಟೇಗಾರಪಾಳ್ಯ ನಿವಾಸಿ ರಾಜೇಶ್ವರಿ(36) ಎಂಬವರು ನೀಡಿದ ದೂರಿನ ಮೇರೆಗೆ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯ ಶುಶ್ರೂಕಿಯರಾದ ಅಕ್ಷತಾ, ಅದೀನಾ, ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಪ್ರೇಮಮ್ಮಾ ಎಂಬುವರ ವಿರುದ್ಧ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    Provided by
    Provided by

    ಫೆ.8ರಂದು ಮಧ್ಯಾಹ್ನ ದೂರುದಾರರಾದ ರಾಜೇಶ್ವರಿಗೆ ಎದೆನೋವು ಕಾಣಿಸಿಕೊಂಡಿದೆ.ರಾತ್ರಿ ನೋವು ಹೆಚ್ಚಾದ ಕೂಡಲೇ ಪತಿ ಗಾಬರಿಗೊಂಡಿದ್ದಾರೆ. ವೆಂಕಟೇಶಮೂರ್ತಿ ಅವರು ತಕ್ಷಣ ಪತ್ನಿ ರಾಜೇಶ್ವರಿಯನ್ನು ತಡರಾತ್ರಿ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದಾರೆ. ಇಸಿಜಿ ಮಾಡಿಸಲು ಸೂಚಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ ನರ್ಸ್‌ ಅಕ್ಷತಾ ಇಸಿಜಿ ಮಾಡಬೇಕೆಂದು, ಮಾಂಗಲ್ಯ ಸರ ತೆಗೆಯಲು ಹೇಳಿದ್ದಾರೆ.

    ಆಗ ಸುಮಾರು 2.50 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಸರ ಬಿಚ್ಚಿ ತಮ್ಮ ಪತಿಯ ಕೈಗೆ ನೀಡಲು ರಾಜೇಶ್ವರಿ ಮುಂದಾಗಿದ್ದಾರೆ. ಆಗ ನರ್ಸ್‌ ಅಕ್ಷತಾ ಮಾಂಗಲ್ಯ ಸರವನ್ನು ತಲೆದಿಂಬಿನ ಕೆಳಗೆ ಇರಿಸುವಂತೆ ಸೂಚಿಸಿದ್ದಾರೆ. ಆದರೂ ರಾಜೇಶ್ವರಿ ಪತಿಯ ಕೈಗೆ ಕೊಡುವೆ. ಅವರನ್ನು ಕರೆಯಿರಿ ಎಂದಾಗ, ಅಕ್ಷತಾ ದಿಂಬಿನ ಕೆಳಗೆ ಇಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ದಿಂಬಿನ ಕೆಳಗೆ ಮಾಂಗಲ್ಯ ಸರ ಇಟ್ಟಿದ್ದಾರೆ.

    ಬಳಿಕ ಎದೆಗೆ ಜೆಲ್‌ ಹಾಕಿ ಇಸಿಜಿ ಮಾಡಿದ ಅಕ್ಷತಾ, ಜೆಲ್‌ ಒರೆಸಿಕೊಂಡು ಹೊರಡಿ ಎಂದು ರಾಜೇಶ್ವರಿಯನ್ನು ಆತುರಾತುರವಾಗಿ ಹೊರಗೆ ಕಳುಹಿಸಿದ್ದಾರೆ. ಈ ವೇಳೆ ನರ್ಸ್‌ ಅದೀನಾ ಸಹ ಅಕ್ಷತಾ ಹಾಗೂ ಸ್ವತ್ಛತಾ ಸಿಬ್ಬಂದಿ ಪ್ರೇಮಮ್ಮಾ ಜತೆಗೆ ಇದ್ದರು.

    ಬಳಿಕ ರಾಜೇಶ್ವರಿ ಮಾಂಗಲ್ಯ ಸರವನ್ನು ಮರೆತು ಪತಿಯ ಜತೆಗೆ ಮನೆಗೆ ತೆರಳಿದ್ದಾರೆ. ಚುಚ್ಚುಮದ್ದು ಪಡೆದುಕೊಂಡಿದ್ದರಿಂದ ರಾಜೇಶ್ವರಿ ಗಾಢ ನಿದ್ದೆಗೆ ಜಾರಿದ್ದಾರೆ. ಮರು ದಿನ ಸ್ನಾನ ಮಾಡುವಾಗ ಮಾಂಗಲ್ಯ ಸರ ನೆನಪಾಗಿ, ಕೆಲ ಹೊತ್ತಿನ ಬಳಿಕ ದಂಪತಿ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಜಗಳ ಮಾಡಿದ್ದಾರೆ, ಹೀಗಾಗಿ ಇಸಿಜಿ ವೇಳೆ ಸ್ಥಳದಲ್ಲಿ ನರ್ಸ್‌ ಗಳಾದ ಅಕ್ಷತಾ, ಅದೀನಾ, ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಪ್ರೇಮಮ್ಮಾ ಮೇಲೆ ಅನುಮಾನವಿದೆ ಎಂದು ರಾಜೇಶ್ವರಿ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಗಳಲ್ಲಿ ನೀವು ಮೇಜರ್ ಆಪರೇಶನ್‌ ಗೊಳಗಾದಾಗ ಚಿನ್ನಾಭರಣಗಳ ಬಗ್ಗೆ ತುಂಬಾ ಕಣ್ಣಿಟ್ಟಿರಬೇಕಾಗುತ್ತದೆ. ಮಾತ್ರವಲ್ಲ ಮನೆಯವರು ಇದ್ದಾಗ ಅವರ ಕೈಯಲ್ಲೇ ಕೊಟ್ಟು ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ ಅನ್ನೋದಕ್ಕೆ ಇಂತಹ ಘಟನೆಗಳೇ ಸಾಕ್ಷಿಯೆನಿಸಿಕೊಂಡಿದೆ.

    admin
    • Website

    Related Posts

    ತುರ್ತು ಸಂದರ್ಭದಲ್ಲಿ ಜೀವ ರಕ್ಷಕನಾಗಲಿದ್ದಾನೆ ಸಾಮಾನ್ಯ ನಾಗರಿಕ: ‘ತಾಯಿ’ ಯೋಜನೆಗೆ ಚಾಲನೆ

    May 6, 2026

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ

    May 5, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಚಿಕ್ಕನಾಯಕನಹಳ್ಳಿ: ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್‌ — ಸಾರ್ವಜನಿಕರಿಗೆ ಸುವರ್ಣಾವಕಾಶ

    May 6, 2026

    ಚಿಕ್ಕನಾಯಕನಹಳ್ಳಿ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ 2026ರ ಆಗಸ್ಟ್ 21, 22 ಮತ್ತು 23…

    ತುರ್ತು ಸಂದರ್ಭದಲ್ಲಿ ಜೀವ ರಕ್ಷಕನಾಗಲಿದ್ದಾನೆ ಸಾಮಾನ್ಯ ನಾಗರಿಕ: ‘ತಾಯಿ’ ಯೋಜನೆಗೆ ಚಾಲನೆ

    May 6, 2026

    ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು

    May 5, 2026

    ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ

    May 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.