ಸರಗೂರು: ದೇಶದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿರ್ವಾಳ್ ಬಸವರಾಜು ಹೇಳಿದರು.
ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಪಂಚಾಯಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಂವಿಧಾನದ ಪಾಲನೆ ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿರಿಸಬೇಕೆಂಬ ಉದ್ದೇಶದಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹೊರಡಿಸಿದೆ.
ಸಂವಿಧಾನ ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ನೀಡಿ ಬದುಕು ಕಟ್ಟಿಕೊಳ್ಳುವ ಹಕ್ಕು ನೀಡಿದೆ. ಆದ್ದರಿಂದ ಮಹಿಳೆಯರು ಹಾಗೂ ನಾವೆಲ್ಲರೂ ಸಂವಿಧಾನದ ಹಕ್ಕು ಮರೆಯಬಾರದು.
ಅದಕ್ಕಾಗಿ ಸರಗೂರು ತಾಲೂಕಿನ ವ್ಯಾಪ್ತಿಯ ಗ್ರಾಪಂಗಳು ಮತ್ತು ಪಟ್ಟಣಕ್ಕೆ ದಿನಾಂಕ 21ರಿಂದ 22 ರವರೆಗೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಲಿದ್ದು, ಈ ಜಾಥಾ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಮಕ್ಕಳು, ವಿವಿಧ ಸಂಘ ಸಂಸ್ಥೆಗಳು, ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಮಹಿಳೆಯರು, ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದವರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿ ಜಾಥಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು. ಸಭೆಯ ಅಧ್ಯಕ್ಷತೆಯನ್ನು ಗ್ರೇಡ್ 2 ತಹಶೀಲ್ದಾರ್ ಪರಶಿವಮೂರ್ತಿ ವಹಿಸಿದ್ದರು.
ನಂತರ ಲಂಕೆ ಲಕ್ಷ್ಮಣ್, ಗೋವಿಂದರಾಜು ಮಾತನಾಡಿ ಸಂಬಂಧಪಟ್ಟ 32 ಇಲಾಖೆ ಗಳಲ್ಲಿ ಈ ಸಭೆಗೆ 11 ಇಲಾಖೆ ಯ ಅಧಿಕಾರಿಗಳು ಮಾತ್ರಹಾಜರಾಗಿದ್ದು, ಉಳಿದ ಇಲಾಖೆ ಅಧಿಕಾರಿಗಳು ಯಾಕೆ ಹಾಜರಾಗಿಲ್ಲ ಮತ್ತು ಸಂವಿಧಾನ ಜಾಗೃತಿ ಜಾಥಾ ಪೂರ್ವ ಬಾವಿ ಸಭೆಗೆ ಬಂದಿಲ್ಲ ಅಂದರೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಯಾವ ರೀತಿ ಆಯೋಜಿಸುತ್ತಿರ ಎಂದು ಪ್ರಶ್ನಿಸಿದರಲ್ಲದೇ, ಜಿಲ್ಲಾಧಿಕಾರಿಗಳು ಮಾಹಿತಿಯನ್ನು ನೀಡಿ ಅವರಿಗೆ ನೋಟಿಸ್ ನೀಡಿ ಕ್ರಮ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಭೀಮರಾಜು ಮಾತನಾಡಿ, ಸರಗೂರು ತಾಲೂಕು 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರೆ, ಹೆಗ್ಗನೂರು, ಬಿ.ಮಟಕೆರೆ, ಹಂಚಿಪುರ, ಎಂ.ಸಿ.ತಳಲು, ಹಾದನೂರು, ಸರಗೂರು ಪಟ್ಟಣ,ಇಟ್ನಾ, ಕೊತ್ತೇಗಾಲ, ಮನುಗನಹಳ್ಳಿ, ಕೆ.ಬೆಳತ್ತೂರು ಮುಳ್ಳೂರು, ಗ್ರಾ.ಪಂ.ಗಳಲ್ಲಿ ಸರಗೂರು ತಾಲೂಕಿನ ಒಕ್ಕಲಿಗ ಸಂಘದ ಪಟ್ಟಣದಲ್ಲಿ ಅಂಬೇಡ್ಕರ್ ಅವರ ಹಾಗೂ ಸಂವಿಧಾನದ ವಿಚಾರಗಳನ್ನು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದರು .
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ಧರಾಜು, ನಾಯಕ ಸಮಾಜ ತಾಲ್ಲೂಕು ಅಧ್ಯಕ್ಷ ಶಂಭುಲಿಂಗನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಎಸ್ಸಿ ಎಸ್ಟಿ ಜಿಲ್ಲಾ ಸದಸ್ಯ ವೇಣುಗೋಪಾಲ್, ಮಹೇಶ್, ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ದಸಂಸ ಚಂದ್ರ ಹಾದನೂರು, ಮಣಿಕಂಠ, ಕೃಷ್ಣ, ಮಹೇಂದ್ರ, ಗ್ರಾ.ಪಂ. ಅಧ್ಯಕ್ಷ ಶಿವಣ್ಣ, ರಾಜಣ್ಣ, ಶಿವಶಂಕರ್, ಪುಟ್ಟಸ್ವಾಮಿ, ಶಿವಚನ್ನ, ಮಹದೇವಮೂರ್ತಿ, ಪಶು ಸಂಗೋಪನಾ ನಿರ್ದೇಶಕರ ವೈ.ಡಿ. ರಾಜಣ್ಣ, ಇಓ ಸುಷ್ಮಾ, ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ನಾಗರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಶಾ, ಎಪಿಎಂಸಿ ಕಾರ್ಯದರ್ಶಿ ವಸಂತಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಗೋವಿಂದರಾಜು, ಇನ್ನೂ ಮುಖಂಡರು ಹಾಗೂ ಅಧಿಕಾರಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ


