ಡ್ರಾಪ್ ಕೊಡುತ್ತೀವಿ ಎಂದು ಕರೆದುಕೊಂಡು ಹೋಗಿ ಚಿನ್ನಾಭರಣವನ್ನು ಕಿತ್ತುಕೊಂಡು ಮಹಿಳೆಯನ್ನು ಕೊಂದು ನೀರಿನ ಟ್ಯಾಂಕಿಗೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ತಾಲೂಕಿನ ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುಳ ಮೃತ ರ್ದುದೈವಿ.
ಮಂಜುಳ ಎಂಬ ಮಹಿಳೆ, ಊರ ಹಬ್ಬ ಎಂದು ಫೆಬ್ರವರಿ 11ರಂದು ಮಗಳ ಮನೆಗೆ ಹೊರಟ್ಟಿದ್ದರು. ಮಂಜುಳಾರನ್ನು ಬಸ್ ನಿಲ್ದಾಣದವೆರಗೂ ಡ್ರಾಪ್ ಮಾಡ್ತೀನಿ ಎಂದು ಜೀವನ್ ಎಂಬಾತ ಕರೆದಿದ್ದ. ಪರಿಚಯಸ್ಥನೇ ಕರೆದ ಕಾರಣಕ್ಕೆ ಆತನನ್ನು ನಂಬಿ ಮಂಜುಳ ಹೋಗಿದ್ದರು.


