ಕೆ.ಆರ್.ಪೇಟೆ ತಾಲ್ಲೂಕಿನ ಕಟ್ಟೆಕ್ಯಾತನಹಳ್ಳಿ ಗ್ರಾಮದ ಭೂಮಿಕ ಭೂಮೇಶ್ ನಾಯಕ ನಟಿಯಾಗಿ ನಟಿಸಿರುವ ಮಂಡ್ಯ ಹೈದ ಕನ್ನಡ ಚಲನಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ತೆರೆ ಕಾಣುತ್ತಿದೆ. ಮಂಡ್ಯದ ಬೂದನೂರಿನ ಅಭಯಚಂದ್ರು ನಾಯಕನಾಗಿ ನಟಿಸಿರುವ ಮಂಡ್ಯ ಹೈದ ಚಲನ ಚಿತ್ರವನ್ನು ವಿ.ಶ್ರೀಕಾಂತ್ ನಿರ್ದೇಶನ ಮಾಡಿದ್ದು ಕಾಮಿಡಿ ಖಿಲಾಡಿಗಳು ಖ್ಯಾತಿಯ ಮನೋಹರ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಮಂಡ್ಯ ಮಣ್ಣಿನ ಗ್ರಾಮೀಣ ಸೊಗಡಿನ ನವಿರಾದ ಪ್ರೇಮಕತೆ ಹಾಗೂ ಸಾಮಾಜಿಕ ಸಂದೇಶ ಹೊಂದಿರುವ ಈ ಚಲನ ಚಿತ್ರದಲ್ಲಿ ಐದು ಹಾಡುಗಳಿದ್ದು ಅತ್ಯಂತ ಸುಂದರವಾಗಿ ಮೂಡಿಬಂದಿವೆ.
ಕನ್ನಡ ಚಿತ್ರ ರಸಿಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿ ಹೊಸ ಕಲಾವಿದರನ್ನು ಹರಸಿ ಆಶೀರ್ವದಿಸಬೇಕು ಎಂದು ನಾಯಕ ನಟಿ ಭೂಮಿಕಾ ಮತ್ತು ಚಿತ್ರ ನಿರ್ದೇಶಕ ಶ್ರೀಕಾಂತ್ ಕೈಮುಗಿದು ಮನವಿ ಮಾಡಿದರು.
ಕಾಂಗ್ರೆಸ್ ನಾಯಕ ಬಿ.ಎಲ್.ದೇವರಾಜು, ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಟ್ಟೇ ಕ್ಯಾತನಹಳ್ಳಿ ಪಾಪಣ್ಣ ಮಂಡ್ಯ ಹೈದ ಚಿತ್ರವು ಶತ ದಿನೊತ್ಸವದ ಸಂಭ್ರಮ ಕಾಣಲಿ ಎಂದು ಶುಭ ಹಾರೈಸಿದರು.


