ತಮಿಳುನಾಡು: ಪಟಾಕಿ ಘಟಕದ ವಿನ್ನರ್ ನಲ್ಲಿ ಇಂದು ಹಠಾತ್ ಸ್ಫೋಟ ಸಂಭವಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ವೆಂಬಕೊಟ್ಟೈ ಬಳಿಯ ರಾಮುತೇವನ ಪಟ್ಟಿಯಲ್ಲಿ ನಡೆದಿದೆ. ಈ ಘಟಕವನ್ನು ವಿಜಯ್ ಒಡೆತನದ ಖಾಸಗಿ ಪಟಾಕಿ ಕಾರ್ಖಾನೆ ಎಂದು ಹೇಳಲಾಗಿದೆ.
ಈ ಸ್ಫೋಟದಿಂದ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಕಾರ್ಮಿಕರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಫೋಟದ ಬಳಿಕ ಹೊತ್ತಿ ಉರಿಯುತ್ತಿರುವ ಪಟಾಕಿ ತಯಾರಿಕಾ ಕಾರ್ಖಾನೆ ಬೆಂಕಿ ನಂದಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದಾರೆ. ಇದರ ಒಳಗೆ ಸಿಕ್ಕಿಕೊಂಡಿರುವ ಕಾರ್ಮಿಕರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


