ಬೆಂಗಳೂರು: ಸಂವಿಧಾನವೇ ನಮ್ಮ ಧರ್ಮ ಗ್ರಂಥ, ಬಿಜೆಪಿಯವರು ಹಾಗೂ ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತ ಸಂವಿಧಾನ ಹಾಗೂ ಐಕ್ಯತಾ ಸಮಾವೇಶಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅವರು, ಸಂವಿಧಾನದಲ್ಲಿ ಕೆಲವರಿಗೆ ನಂಬಿಕೆ, ಗೌರವ ಇಲ್ಲ. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ ಅಂತೇನಿಲ್ಲ, ಗೊತ್ತಿದ್ದೂ ದಾರಿ ತಪ್ಪಿಸುತ್ತಿದ್ದಾರೆ. ಯಾರು ದಾರಿ ತಪ್ಪಿಸುತ್ತಿದ್ದಾರೆ ಎಂದು ನನ್ನ ಬಾಯಿಯಿಂದ ಹೇಳಿಸಬೇಡಿ ಎಂದಿದ್ದಾರೆ.
ಶುಕ್ರವಾರ ಮಂಡನೆಯಾದ ಬಜೆಟ್ನ ಮೊದಲ ಪುಟದಲ್ಲೇ ಸಂವಿಧಾನದ ಪೀಠಿಕೆಯಲ್ಲಿ ಹಾಕಿಸಲಾಗಿದೆ. ಇದು ಇತಿಹಾಸಲ್ಲೇ ಮೊದಲ ಬಾರಿಗೆ ಬಜೆಟ್ನಲ್ಲಿ ಸಂವಿಧಾನದ ಪೀಠಿಕೆ ಉಲ್ಲೇಖ ಆಗಿರುವುದು. ಜನರಿಗೆ ಸಂವಿಧಾನದ ಮಹತ್ವ ಅರ್ಥ ಆಗಬೇಕು. 75 ವರ್ಷ ಆದರೂ ಇನ್ನೂ ಕೂಡ ಎಲ್ಲರಿಗೂ ಸಂವಿಧಾನದ ಹಕ್ಕುಗಳು ಸಿಕ್ಕಿಲ್ಲ. ಸಂವಿಧಾನಕ್ಕೆ ಯಾರೇ ಧಕ್ಕೆ ತರುವ ಪ್ರಯತ್ನ ಮಾಡಿದ್ರೂ ಜನರು ಅದನ್ನು ವಿಫಲಗೊಳಿಸಬೇಕು ಎಂದಿದ್ದಾರೆ.
ರಾಜಕೀಯ, ಸಾಮಾಜಿಕ ಅಸಮಾನತೆ ಇನ್ನೂ ಹೋಗಿಲ್ಲ, ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಜಾಗೃತಿ ಎಲ್ಲರಲ್ಲೂ ಬರಬೇಕು. ಸಂವಿಧಾನ ಏನ್ ಹೇಳುತ್ತೆ ಎಂದು ಎಲ್ಲರಿಗೂ ಗೊತ್ತಾಗಲಿ ಎಂದು ಈ ಜಾಥಾ ಮಾಡುತ್ತಿದ್ದೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಆಗ್ತಾ ಇದೆಯಾ? ಅದರ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು. ಅವಕಾಶ ವಂಚಿತರಿಗೆ ಅವಕಾಶ ಸಿಗಬೇಕು ಎಂದಿದ್ದಾರೆ.


