ತುರುವೇಕೆರೆ: ತಾಲ್ಲೂಕಿನ ಅಮ್ಮಸಂದ್ರದಲ್ಲಿರುವ ಹೈಡಲ್ ಬರ್ಗ್ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ಕೆಲವು ವ್ಯಕ್ಯಿಗಳು ಪ್ಲಾಂಟ್ ಹೆಡ್ ಹಾಗೂ ಹೆಚ್.ಆರ್ ಮ್ಯಾನೇಜರ್ ಮತ್ತು ಕಂಪನಿಯ ವಿರುದ್ಧ ಷಡ್ಯಂತ್ರ ಹೂಡಿ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎ.ಐ.ಟಿ.ಯು.ಸಿ ಸಂಘಟನೆಯ ಉಪಾಧ್ಯಕ್ಷ ರಘು ಸಿ.ಎಸ್ ಅಭಿಪ್ರಾಯ ಪಟ್ಟರು.
ಅಮ್ಮಸಂದ್ರದಲ್ಲಿರುವ ಹೈಡಲ್ ಬರ್ಗ್ ಸಿಮೆಂಟ್ ಫ್ಯಾಕ್ಟರಿ ಮೇನ್ ಗೇಟ್ ಮುಂಬಾಗ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗುತ್ತಿಗೆ ನೌಕರರ ಬರಿಗೈಯಿಂದ ಆಡಳಿತ ಮಂಡಳಿಯವರು ಮಲಗುಂಡಿಯನ್ನು ಸ್ವಚ್ಛ ಮಾಡಿಸಿದೆ ಎಂದು, ಗುತ್ತಿಗೆ ನೌಕರ ಏನ್. ಹೊನ್ನಪ್ಪ ಆರೋಪಿಸಿದ ಹಿನ್ನೆಲೆಯಲ್ಲಿ, ನಾವು ಈ ಸುಳ್ಳು ದೂರನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ನಮ್ಮ ಸಂಘಟನೆಯು ಯಾವುದೇ ಕಾರಣಕ್ಕೂ ಇಂತಹವರನ್ನು ಬೆಂಬಲಿಸುವುದಿಲ್ಲ ಈ ದೂರು ಸತ್ಯಕ್ಕೆ ದೂರವಾದದ್ದು. ನಮ್ಮ ಕಂಪನಿಯಲ್ಲಿ ಮೊದಲ ಆದ್ಯತೆ ಸುರಕ್ಷತೆಗೆ ನೀಡುತ್ತದೆ. ಬರಿ ಕೈಯ್ಯಲ್ಲಿ ಮಲದ ಗುಂಡಿಯನ್ನು ಸ್ವಚ್ಛ ಮಾಡುವ ಕಾರ್ಯ ನಮ್ಮಲ್ಲಿಲ್ಲ. ಅದಕ್ಕೆ ಬೇಕಾದ ಯಂತ್ರೋಪಕರಣಗಳು ನಮ್ಮಲ್ಲಿವೆ. ಕೆಲವರು ಸ್ವಹಿತಾಸಕ್ತಿಯಿಂದ ಕಾರ್ಖಾನೆಯನ್ನು ಮುಚ್ಚಿಸಲು ಇಂತಹ ಕಾರ್ಯಗಳನ್ನು ಮಾಡುತಿದ್ದಾರೆ ಮತ್ತೆ ಕೆಲವು ಖಾಸಗೀ ವ್ಯಕ್ತಿಗಳು ದುರುದ್ದೇಶ ಪೂರಿತವಾಗಿ ಅಮಾಯಕ ದಲಿತ ಏನ್. ಹೊನ್ನಪ್ಪ ಎಂಬ ನೌಕರನನ್ನು ಬಳಸಿಕೊಂಡು, ಕಂಪನಿಯ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಸುಳ್ಳು ದೂರುಗಳನ್ನು ಧಾಖಲಿಸಲಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ನಮ್ಮ ಎ .ಐ.ಟಿ.ಯು.ಸಿ. ಸಂಘಟನೆಯು ಬೆಂಬಲ ಕೊಡುವುದಿಲ್ಲ. ಪ್ಲಾಂಟ್ ಹೆಡ್ ಹಾಗೂ ಹೆಚ್.ಆರ್ ಮ್ಯಾನೇಜರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತಿದ್ದಾರೆ. ಇದು ಶುದ್ದ ಸುಳ್ಳು. ಕಂಪನಿಯನ್ನು ನಂಬಿ 400 ಕುಟುಂಬಗಳು ಬದುಕುತ್ತಿವೆ. ಇಂತಹ ಘಟನೆಗಳಿಂದ ಕಂಪನಿ ಮುಚ್ಚಿದರೆ, ನಮ್ಮ 5ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಹೇಳಿದರು.
ನಮ್ಮ ಎ.ಐ.ಟಿ.ಯು.ಸಿ. ಸಂಘಟನೆಯು ಮೊದಲಿನಿಂದಲೂ, ದಲಿತ ಸಂಘಟನೆಗಳನ್ನು ಬೆಂಬಲಿಸುತ್ತಾ ಬಂದಿದೆ. ಕಂಪನಿಯಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಒಟ್ಟಾಗಿ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. ಅಮಾಯಕ ದಲಿತರನ್ನು ಗಾಳವಾಗಿ ಬಳಸಿಕೊಂಡು ದುರುದ್ದೇಶ ಪೂರಕವಾಗಿ, ಇಲ್ಲ ಸಲ್ಲದ ಆರೋಪ ಮಾಡಿ ಕೇಸು ದಾಖಲಿಸುತ್ತಿರುವುದು, ಕಂಪನಿಯ ಹೆಸರಿಗೆ ಮಸಿಬಳೆಯುವ ಕೆಲಸವಾಗಿದೆ. ಈ ರೀತಿಯ ದೂರುಗಳು ಬಂದಾಗ ಸತ್ಯವನ್ನು ಪರಿಶೀಲನೆ ಮಾಡಿ ಎಂದು ಸಂಘಟನೆಗಳಿಗೆ ಮನವಿ ಮಾಡಿ, ಕಂಪನಿಯು ನಷ್ಟದಲ್ಲಿದ್ದು ಈ ಘಟನೆಗಳು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂದೆ ಆಗುವ ಅನಾಹುತಗಳಿಗೆ ದಾರಿ ಮಾಡಿ ಕೊಡಬೇಡಿ, ಇದನ್ನು ನಂಬಿಕೊಂಡು ಜೀವನ ನೆಡೆಸುತ್ತಿರುವವರು ಬೀದಿಗೆ ಬೀಳುತ್ತಾರೆ ಎಂದು ದಲಿತ ಸಂಘಟನೆಗಳಿಗೆ ಮನವಿ ಮಾಡಿ ಖಾಸಗೀ ವ್ಯಕ್ತಿಗಳು ದುರುದ್ದೇಶ ಪೂರಿತವಾಗಿ ಇಂತಹ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸದಿದ್ದರೆ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಜೊತೆ ಸಂಪರ್ಕದಲ್ಲಿದ್ದೇವೆ. ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಂಗಾಧರ್ ಎಸ್.ಆರ್ ,ಖಾಜಾಚಿ ತಿಮ್ಮಯ್ಯ ಸಿ.ಎಸ್. ಸಹ ಕಾರ್ಯದರ್ಶಿ ನಂಜುಂಡೇಗೌಡ ಡಿ.ಜಿ. ಪದಾಧಿಕಾರಿಗಳಾದ ರವಿ. ಹೆಚ್. ಆರ್. ರಘು. ಡಿ. ರಂಗಸ್ವಾಮಿ. ಗಂಗಾಧರಯ್ಯ ಕೆ.ಎ, ವಸಂತ್ ಕುಮಾರ್, ಸಿದ್ದೇಗೌಡ ಡಿ.ಎಸ್ ಸೇರಿದಂತೆ ಖಾಯಂ ಹಾಗೂ ಗುತ್ತಿಗೆ ನೌಕರರು ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


