ಕಾಟೇರ ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪ್ರಸನ್ನ ಥಿಯೇಟರ್‌ನಲ್ಲಿ ಸಂಭ್ರಮಾಚರಣೆ ನಡೆದಿದೆ. ಈ ಒಂದು ಇವೆಂಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಉಮಾಪತಿ ಅವರ ಕುರಿತು ಮಾತನಾಡಿ ತಗಡು ಎಂಬ ಪದವನ್ನು ಬಳಿಸಿದರು. ಇದು ಈಗ ಎಲ್ಲೆಡೆ ವೈರಲ್ ಆಗಿದೆ.
ದರ್ಶನ್ ಹೇಳಿಕೆಗೆ ಸೈಲೆಂಟ್ ಆಗಿಯೇ ತಿರುಗೇಟು ಕೊಟ್ಟ ಉಮಾಪತಿ ನನಗೆ ತಾಕತ್ ಇರೋದಕ್ಕೆ ನಾನು ಇಲ್ಲಿ ಬೆಳೆದಿದ್ದೀನಿ. ದೇಹ ತೂಕ ಇದ್ದರೆ ಸಾಲದು ಮಾತನಾಡುವ ಮಾತು ತೂಕ ಇರಬೇಕು ಎಂದು ಸೈಲೆಂಟಾಗಿಯೇ ತಿರುಗೇಟು ಕೊಟ್ಟಿದ್ದಾರೆ.
ನಾನು ತಗಡೆ ಒಂದು ದಿನ ಚಿನ್ನದ ತಗಡೆ ಆಗುವೆ! ನಾನು ಸಿನಿಮಾ ಮಾಡುವುದಕ್ಕಿಂತ ನನ್ನ ಆಲೋಚನೆ ಬೇರೆ ಇದೆ ಎಂದರು.
ದೊಡ್ಡವರು ಮಾತನಾಡಿದ್ದಾರೆ ಮಾತನಾಡಲಿ, ಏನು ಪ್ರಾಬ್ಲಂ ಇಲ್ಲಾ, ಆ ದೇವರು ಗುಮ್ಮಬೇಕು, ಎಲ್ಲಾರು ಗುಮ್ಮಿಸಿಕೊಳ್ಳಬೇಕು. ದೇವರು ಅವರನ್ನು ಚೆನ್ನಾಗಿಟ್ಟಿರಲಿ ಎಂದು ಕೌಂಟರ್ ನೀಡಿದ್ದಾರೆ.


