ಕುಡಿದ ಮತ್ತಿನಲ್ಲಿ ಬಾರ್ ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್ ನಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಬಾರ್ ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್ನಲ್ಲಿ ನಡೆದಿದೆ. ಸೋಮು ಎಂಬಾತನನ್ನ ನಾಯಿ ಗೂಡಿನಲ್ಲಿ ಬಂಧಿಸಿಟ್ಟ ಬಾರ್ ಸಿಬ್ಬಂದಿ ಎಂದು ವರದಿ ತಿಳಿಸಿದೆ.
ಕುಡಿಯಲು ಬಾರ್ ಗೆ ಬಂದಿದ್ದ ವೇಳೆ ಬಾರ್ ಮುಂದೆ ಲ್ಯಾಬ್ರಡಾರ್ ನಾಯಿಯನ್ನು ನೋಡಿದ್ದ. ಬಳಿಕ ನಾಯಿ ಕದ್ದುಕೊಂಡು ಹೋಗಿದ್ದ. ಈ ವಿಚಾರ ಬಾರ್ ಸಿಬ್ಬಂದಿಗೆ ಗೊತ್ತಾಗಿ. ಕದ್ದವನನ್ನು ಹಿಡಿದು ತಂದಿದ್ದಾರೆ. ಬಳಿಕ ಬಾರ್ ನಲ್ಲಿ ನಾಯಿ ಕಟ್ಟುತ್ತಿದ್ದ ಸ್ಥಳದಲ್ಲೇ ವ್ಯಕ್ತಿಯನ್ನು ಕೆಲ ಕಾಲ ಕಟ್ಟಿಹಾಕಿದ್ದಾರೆ.
ನಾಯಿಯನ್ನು ಕಟ್ಟುತ್ತಿದ್ದ ಸ್ಥಳದಲ್ಲೇ ಗೂಡಿನಲ್ಲಿ ಹಾಕಿ ಅಲ್ಲೇ ನಾಯಿಗೆ ಆಹಾರ ನೀಡುವಂತೆ ನೀಡಿದ್ದಾರೆ. ಈ ದೃಶ್ಯ ನೋಡಿ ಬಾರ್ ಗೆ ಬಂದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಎಚ್ಚೆತ್ತ ಬಾರ್ ಸಿಬ್ಬಂದಿ ಕುಡುಕನನ್ನು ವಾಪಸ್ ಕಳಿಸಿದ್ದಾರೆ. ಆದರೆ ಈ ವಿಚಾರವಾಗಿ ಜನರಿಂದ ಜನರಿಗೆ ತಿಳಿದು ಇದೀಗ ವ್ಯಕ್ತಿಯನ್ನು ಅಮಾನುಷವಾಗಿ ನಡೆಸಿಕೊಂಡ ಬಾರ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.


