ಆದಿಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡವೊಂದರಲ್ಲಿ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆಂದು ಹಣ್ಣು ಕಾಯಿ ಖರೀದಿಸಲು ಹೋಗಿದ್ದರು. ಆಗ ಮಗು ರಸ್ತೆಯ ಬದಿಗೆ ಬಂದಿದೆ. ಅದೇ ಸಮಯದಲ್ಲಿ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿಯಬೇಕು ಎನ್ನುವಷ್ಟರಲ್ಲಿ ಅಲ್ಲೇ ಮಲಗಿದ್ದ ನಾಯಿಯೊಂದು ಓಡಿ ಹೋಗಿ ಮಗುವಿಗೆ ಅಡ್ಡ ನಿಂತಿದೆ. ಹಾಗೂ ಹಾವನ್ನು ತುಳಿಯದಂತೆ ಹಾಗೂ ಹಾವು ಸರಾಗವಾಗಿ ಹೋಗಲು ಅವಕಾಶ ನೀಡಿದೆ.
ನಾಗ ದೇವರ ಸನ್ನಿಧಿಯಲ್ಲಿ ಮಗುವಿನ ರಕ್ಷಕನಾಗಿ ನಾಯಿಯೊಂದು ಜೀವ ಉಳಿಸಿದ್ದು, ನಿಜಕ್ಕೂ ಆಶ್ಚರ್ಯಕರ. ಇದೀಗ ಈ ಘಟನೆಯ ಪ್ರತ್ಯಕ್ಷದರ್ಶಿಗಳು ಈ ಸುದ್ದಿಯನ್ನು ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬರಹ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


