nammatumakuru

    Subscribe to Updates

    Get the latest creative news from FooBar about art, design and business.

    What's Hot

    ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು

    May 5, 2026

    ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ

    May 5, 2026

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026
    Facebook Twitter Instagram
    ಟ್ರೆಂಡಿಂಗ್
    • ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು
    • ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ
    • ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
    • ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ
    • ಗುಬ್ಬಿ: ಮೇ 25ರಂದು ಬಸವ ಜಯಂತಿ ಆಚರಣೆ
    • ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ
    • ಸರ್ಕಾರಿ ಶಾಲೆ ಉಳಿಸುವ ಸಂಕಲ್ಪದೊಂದಿಗೆ: ಮಕ್ಕಳ ಬೇಸಿಗೆ ಶಿಬಿರ
    • ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು, ಓರ್ವನ ಸ್ಥಿತಿ ಗಂಭೀರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೋರ್ ವೆಲ್ ಮೂಲಕ ನೀರು ಪೂರೈಕೆಗೆ ಕ್ರಮ: ಸಚಿವ ಕೃಷ್ಣಬೈರೇಗೌಡ
    ರಾಜ್ಯ ಸುದ್ದಿ March 2, 2024

    ಬೋರ್ ವೆಲ್ ಮೂಲಕ ನೀರು ಪೂರೈಕೆಗೆ ಕ್ರಮ: ಸಚಿವ ಕೃಷ್ಣಬೈರೇಗೌಡ

    By adminMarch 2, 2024No Comments2 Mins Read
    krishna bhairegowda

    ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಬರಪರಿಸ್ಥಿತಿ ಆವರಿಸಿದ್ದು, ಬರ ನಿರ್ವಹಣೆ ಕಡೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ. ಬೋರ್ ವೆಲ್ ಮೂಲಕವೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

    ವಿಕಾಸಸೌಧದಲ್ಲಿ ಡಿಸಿ, ಎಸಿ, ಸರ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇನ್ಮೇಲೆ ಸಮಸ್ಯೆ ಉಲ್ಬಣ ಆಗಲಿದೆ ಮೇ ತಿಂಗಳಲ್ಲಿ ಸಮಸ್ಯೆ ಹೆಚ್ಚಾಗಬಹುದು. ಹೀಗಾಗಿ ಬರ ನಿರ್ವಹಣೆಗೆ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ತಿದ್ದೇವೆ. ಕುಡಿಯುವ ನೀರು, ಮೇವಿಗೆ ಆದ್ಯತೆ ಕೊಟ್ಟಿದ್ದೇವೆ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ತಾಲೂಕು, ಗ್ರಾ.ಪಂ ಲೆವೆಲ್ ನಲ್ಲಿ ಟೆಂಡರ್ ಗೆ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ತುರ್ತು ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. 24 ಗಂಟೆಯೊಳಗೆ ನೀರು ಕೊಡುವುದು ಕಷ್ಟ ಅದಕ್ಕೆ ಟ್ಯಾಂಕರ್ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.


    Provided by
    Provided by

    ಟ್ಯಾಂಕರ್ ಮೂಲಕ ನೀರು ಪೂರೈಕೆ ಕಷ್ಟ ಬೋರ್ ವೆಲ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಬೋರ್ ವೆಲ್ ವಶಕ್ಕೆ ಪಡೆಯುತ್ತೇವೆ. ಬರಗಾಲದ ವೇಳೆ ‌ಬೋರ್ ವೆಲ್ ಗೆ ನೀರು ಸಿಗ್ತಿಲ್ಲ. ಬೋರ್ ಕೊರೆದ್ರೂ ಪ್ರಯೋಜನವಿಲ್ಲ. ಬೋರ್ ವೆಲ್ ಹಾಕಿದ್ರೂ ಉಪ್ಪು ನೀರು ಸಿಗುತ್ತೆ. ಆ ಕಾರಣಕ್ಕೆ ಖಾಸಗಿ‌ ಬೋರ್ ವೆಲ್ ವಶಕ್ಕೆ ಪಡೆದುಕೊಳ್ತಿದ್ದೇವೆ. 116 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗಿದೆ. 170 ಟ್ಯಾಂಕ್ ಮೂಲಕ ನೀರು ಕೊಡ್ತಿದ್ದೇವೆ. 380 ಹಳ್ಳಿಗಳಲ್ಲಿ ಬೋರ್ ವೆಲ್ ಮೂಲಕ ನೀರು ಕೊಡುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

    ನಗರ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ಇದೆ. 57 ವಾರ್ಡ್ ಗಳಲ್ಲಿ ಕುಡಿಯುವ ನೀರು ಸಿಗ್ತಿಲ್ಲ. 1200 ವಾರ್ಡ್ ಗಳಲ್ಲಿ ನೀರಿನ ಕೊರತೆ ಎದುರಾಗಬಹುದು. ಅಂತಹ ಕಡೆ ಟ್ಯಾಂಕರ್ ಮೂಲಕ ನೀರು ಕೊಡಬೇಕಿದೆ. 7377 +ಹಳ್ಳಿಗಳಲ್ಲೂ ನೀರಿನ ‌ಕೊರತೆ ಎದುರಾಗಲಿದೆ. ಅಲ್ಲಿಯೂ 7080  ಖಾಸಗಿ ಬೋರ್ ವೆಲ್ ಗುರ್ತಿಸಿದ್ದೇವೆ. 3057 ಬೋರ್ ವೆಲ್ ಗೆ ಅಗ್ರಿಮೆಂಟ್ ಹಾಕಿದ್ದೇವೆ. 25 ಜಿಲ್ಲೆಗಳಲ್ಲಿ‌ ಮೇವಿನ ಕೊರತೆ ಎದುರಾಗಲಿದೆ. ಈಗಾಗಲೇ ಮೇವಿಗೆ ಟೆಂಡರ್ ಮಾಡಿದ್ದೇವೆ. ಜಿಲ್ಲೆಗೊಂದು ಗೋ ಶಾಲೆಗಳು ಇವೆ. ಮೇವು, ನೀರು ಅಲ್ಲಿಗೂ ಪೂರೈಕೆ ಮಾಡಲಾಗುತ್ತದೆ. ಹೋಬಳಿ ‌ಮಟ್ಟದಲ್ಲಿ ಗೋಶಾಲೆ ತೆರೆಯುತ್ತೇವೆ. ಟಾಸ್ಕ್ ಪೋರ್ಸ್ ಸೆಟಪ್ ಮಾಡಿದ್ದೇವೆ. ಡಿಸೆಂಬರ್ ನಿಂದ ಟಾಸ್ಕ್ ಪೋರ್ಸ್ ಸಭೆ ನಡೆದಿವೆ. ಈಗಾಗಲೇ 600 ಸಭೆಗಳನ್ನ ಮಾಡಿದ್ದೇವೆ. 856 ಕೋಟಿ 90 ಲಕ್ಷ ಹಣ ಬರ ನಿರ್ವಹಣೆಗೆ ನೀಡಿದ್ದೇವೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

    ಕುಡಿಯುವ ನೀರಿನ ಟ್ಯಾಂಕರ್ ಗೆ ಡಬಲ್ ರೇಟ್ ಕೇಳುತ್ತಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಇದರ ಬಗ್ಗೆ ಬಿಬಿಎಂಪಿ ಗೈಡ್ ಲೈನ್ಸ್ ಮಾಡಲಿದೆ. ನಮ್ಮ ಡಿಸಿ ಜೊತೆಗೂ ಅವರು ಮಾತನಾಡಿದ್ದಾರೆ. ಸರಿಯಾದ ದಿಕ್ಕಿನಲ್ಲೇ ಅವರು ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರು ಹೊರಭಾಗದಲ್ಲಿ ನಾವು ‌ಮಾಡ್ತೇವೆ. ಬೆಂಗಳೂರು ಹೊರವಲಯದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ. ಅದರ ಖರ್ಚನ್ನ ನಾವೇ ಭರಿಸುತ್ತೇವೆ. ಗ್ರಾಮ ಪಂಚಾಯ್ತಿಯಿಂದಲೇ ಖರ್ಚಿನ ಹಣ ನೀಡಲಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

    ನಾವು ಸರ್ವೆಗೆ ಹೆಚ್ಚಿನ ‌ಒತ್ತು ಕೊಟ್ಟಿದ್ದೇವೆ. ಸರ್ಕಾರಿ ಭೂಮಿ ಮಂಜೂರಾಗಿರುತ್ತೆ. ಆದರೆ ಅವರಿಗೆ ಪೋಡಿ ಆಗಿರುವುದಿಲ್ಲ. ಇದರ ಬಗ್ಗೆ ಹೆಚ್ಚಿನ‌ ಗಮನ ನೀಡ್ತೇವೆ. 991 ಪರವಾನಗಿ ಸರ್ವೆಯರ್ಸ್ ಎಲ್ಲಾ ಜಿಲ್ಲೆಗೆ ಒದಗಿಸ್ತೇವೆ. 364 ಸರ್ಕಾರಿ ಸರ್ವೆಯರ್ ರಿಕ್ರೂಟ್ ಮೆಂಟ್ ಮಾಡ್ತೇವೆ. ಕೆಪಿಎಸ್ ಸಿ ಯಿಂದ ರಿಕ್ರೂಟ್ ಮಾಡಿಕೊಳ್ಳಲಾಗುತ್ತದೆ. ನೊಟಿಫಿಕೇಶನ್ ಸದ್ಯದಲ್ಲೆ ಹೊರಬೀಳಲಿದೆ. 27 ಸರ್ವೆ ಅಸಿಸ್ಟೆಂಟ್  ಡೈರೆಕ್ಟರ್ ನೇಮಕ ನಡೆಯಲಿದೆ. ಪ್ರತಿಯೊಂದು ತಾಲೂಕಿಗೆ ಆಧುನಿಕ ಉಪಕರಣ18 ಕೋಟಿ ವೆಚ್ಚದಲ್ಲಿ‌ ರೋವರ್ಸ್  ಖರೀದಿಸಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

     

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ

    May 5, 2026

    ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ

    May 4, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು

    May 5, 2026

    ತುಮಕೂರು: ದೇವರಾಯ ಪಟ್ಟಣದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ದೇವರ ಹುಂಡಿ ಹೊಡೆದು ಕಳ್ಳತನ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣಾ…

    ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ

    May 5, 2026

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ

    May 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.