nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ದಸರಾ: ಅ.11 ರಿಂದ ಕನ್ನಡ ಪುಸ್ತಕ ಮಾರಾಟ ಮೇಳ: ಮಾರಾಟಗಾರರಿಗೆ ಆಹ್ವಾನ

    September 25, 2026

    ಕರ್ನಾಟಕದಲ್ಲಿ ಬರದಿಂದ 40 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಾಧ್ಯತೆ: ಡಿಸಿಎಂ ಜಿ.ಪರಮೇಶ್ವರ್

    September 25, 2026

    ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!

    September 25, 2026
    Facebook Twitter Instagram
    ಟ್ರೆಂಡಿಂಗ್
    • ಮೈಸೂರು ದಸರಾ: ಅ.11 ರಿಂದ ಕನ್ನಡ ಪುಸ್ತಕ ಮಾರಾಟ ಮೇಳ: ಮಾರಾಟಗಾರರಿಗೆ ಆಹ್ವಾನ
    • ಕರ್ನಾಟಕದಲ್ಲಿ ಬರದಿಂದ 40 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಾಧ್ಯತೆ: ಡಿಸಿಎಂ ಜಿ.ಪರಮೇಶ್ವರ್
    • ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!
    • ಬೆಂಗಳೂರಿಗೆ ಬಂದ MLAಗಳು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ’: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ
    • ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಮರುಜೀವ: ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ ಐಟಿ (SIT) ರಚನೆ!
    • ಹಣ ಕೇಳುವ ನೆಪದಲ್ಲಿ ತೃತೀಯಲಿಂಗಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ: ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ
    • ಸಂತಪೂರದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ್ ಅಪ್ಪೆಗೆ ಸನ್ಮಾನ
    • 2028ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನಗೂ ಅವಕಾಶ ಸಿಗಲಿ: ಪಿ.ಎನ್. ಕೃಷ್ಣಮೂರ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರೊನಾ ಹೆಚ್ಚಿದೆ, ಜಾತ್ರೆ ನಡೆಯುವುದಿಲ್ಲ ಬರಬೇಡಿ: ರೈತರಿಗೆ ತಹಸೀಲ್ದಾರ್ ಮನವಿ
    ಕೊರಟಗೆರೆ January 20, 2022

    ಕೊರೊನಾ ಹೆಚ್ಚಿದೆ, ಜಾತ್ರೆ ನಡೆಯುವುದಿಲ್ಲ ಬರಬೇಡಿ: ರೈತರಿಗೆ ತಹಸೀಲ್ದಾರ್ ಮನವಿ

    By adminJanuary 20, 2022No Comments2 Mins Read
    jathre

    ಕೊರಟಗೆರೆ : ತಾಲ್ಲೂಕಿನ  ಹೊಳವನಹಳ್ಳಿ ಹೋಬಳಿಯ ಸುಪ್ರಸಿದ್ಧ ಕಮನೀಯ ಕ್ಷೇತ್ರದ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿ ವರ್ಷವೂ ಸಂಕ್ರಾಂತಿ ಮುಗಿದ ಮಾರನೇ ದಿನ ರಾಸುಗಳ ಜಾತ್ರೆ ಪ್ರಾರಂಭವಾಗಿ, ಸುಮಾರು ಹತ್ತರಿಂದ ಹದಿನೈದು ದಿನಗಳ ಕಾಲ ಭಾರೀ ರಾಸುಗಳ ಜಾತ್ರೆ ನಡೆಯುತ್ತಿತ್ತು. ರಾಸುಗಳ ಜಾತ್ರೆ ಮುಗಿದ ನಂತರ ಶ್ರೀ ಆಂಜನೇಯ ಸ್ವಾಮಿಯ  ಬ್ರಹ್ಮರಥೋತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಜಾತ್ರೆಗೆ ನಿರ್ಬಂಧ ಹಾಕಲಾಗಿದೆ.

    ಕೊವಿಡ್ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ  ಜಾತ್ರೆ ನಡೆದಂತೆ ತಾಲ್ಲೂಕು ಆಡಳಿತವು  ನಿರ್ಬಂಧವನ್ನು ವಿಧಿಸಿದ್ದು, ಈ ವಿಚಾರ ತಿಳಿಯದೇ  ರಾಸುಗಳನ್ನು ಮಾರಲು ಮತ್ತು ಕೊಳ್ಳಲು ಬಂದ ರೈತರು ನಿರಾಸೆಯಿಂದ ತಮ್ಮ ಊರಿಗೆ ತೆರಳುವಂತಾಗಿದೆ.

    ಈ ಸಂಬಂಧ ತಾಲೂಕ ದಂಡಾಧಿಕಾರಿ ನಹಿದಾ ಜಮ್ ಜಮ್ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭ ಜಾತ್ರೆ ಉರೂಸ್ ಇನ್ನಿತರ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಮುಖೇನ ಸೂಚನೆ ಹೊರಡಿಸಲಾಗಿದೆ. ಆದರೂ ಕ್ಯಾಮೆನಹಳ್ಳಿಯ ಜಾತ್ರೆ ಇದೆ ಎಂದುಕೊಂಡು ಜನರು ಜಾನುವಾರುಗಳನ್ನು  ಮಾರಲು ಮುಂದಾಗಿದ್ದಾರೆ .ಆದರೆ ಈಗ ಇದ್ಯಾವುದೂ ನಡೆಯುವುದಕ್ಕೆ ಅವಕಾಶವಿಲ್ಲ ಕಾರಣ ಕೊರೊನಾ ಎಂಬ ಮಾಹಾಮಾರಿಯು ರಾಜ್ಯ ಜಿಲ್ಲೆ ಸೇರಿದಂತೆ  ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆದ್ದರಿಂದ ಸಾರ್ವಜನಿಕರು ಅಧಿಕಾರಿಗಳ ಜತೆ ಸೌಮ್ಯದಿಂದ ವರ್ತಿಸಿ ಅಧಿಕಾರಿಗಳು ಹೇಳಿದಂತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು  ಕಾಯ್ದುಕೊಂಡು ಯಾವುದೇ ರೋಗರುಜಿನಗಳು ಬರದಂತೆ ಸಹಕರಿಸಿ  ದಯವಿಟ್ಟು ಯಾವುದೇ ಜಾತ್ರೆ ಸಮಾರಂಭಗಳನ್ನು ಇಂತಹ ಸಮಯದಲ್ಲಿ ಮಾಡಬೇಡಿ ಎಂದು ರೈತರು ಹಾಗೂ ಸಾರ್ವಜನಿಕರಲ್ಲಿ  ಮನವಿ ಮಾಡಿದರು .

    ಇನ್ನೂ ಜಾತ್ರೆ ಇದೆ ಎಂದು ಆಗಮಿಸಿದ್ದ ರೈತರೊಬ್ಬರು ಮಾತನಾಡಿ, ಬಹಳ ವರ್ಷಗಳಿಂದ ನಾವು ಈ ಜಾತ್ರೆಗೆ ಬರುತ್ತಿದ್ದೆವು. ನಾವಲ್ಲದೆ ರಾಜ್ಯದ ಅನೇಕ ಭಾಗಗಳಿಂದ ರೈತರು ಬರುತ್ತಿದ್ದರು. ಜಾನುವಾರುಗಳನ್ನು ಮಾರುವುದು, ತೆಗೆದುಕೊಳ್ಳುವುದು ಮಾಡುತ್ತಿದ್ದೆವು. ಆದರೆ ಈ ಬಾರಿ ಜಾತ್ರೆ ಇದೆ ಎಂದುಕೊಂಡು ಬಂದಿದ್ದವು. ಇಲ್ಲಿಗೆ ಬಂದಾಗ ಅರ್ಥವಾಯ್ತು. ಪೋಲಿಸ್ ಅಧಿಕಾರಿಗಳು  ಜಾತ್ರೆ ನಡೆಯುವುದಿಲ್ಲ,  ಊರುಗಳಿಗೆ ಹಿಂತಿರುಗಿ ಎಂದು ತಿಳಿಸಿದರು. ಅದರಂತೆ ನಾವು ವಾಪಸ್ ತೆರಳುತ್ತಿದ್ದೇವೆ ಎಂದು ನಿರಾಸೆ ವ್ಯಕ್ತಪಡಿಸಿದರು.

    ಇನ್ನೂ ಈ ವಿಚಾರವಾಗಿ ದೇವಸ್ಥಾನದ  ಸಮಿತಿ ಅಧ್ಯಕ್ಷ ಬಾಲರಾಜು ಮಾತನಾಡಿ,  ನಾವು ಈಗಾಗಲೇ ಜಾತ್ರೆ ನಡೆಯುವುದಿಲ್ಲ ಎಂದು ಪಾಂಪ್ಲೆಟ್ ಮುಖಾಂತರ ಎಲ್ಲಾ ಹಳ್ಳಿಗಳಿಗೂ ಹಾಗೂ ನಮ್ಮ ತಾಲ್ಲೂಕಿನ ಗಡಿ ಭಾಗದವರೆಗೂ ತಿಳಿಸಿದ್ದೇವೆ. ಆದರೂ ಕೆಲವು ಕಿಡಿಗೇಡಿಗಳು ಮಾಡಿರುವ ವದಂತಿಯಿಂದ ಜಾತ್ರೆಯಿದೆ ಎಂದು ತಿಳಿದುಕೊಂಡು ರೈತರು ದೂರದ ಊರುಗಳಿಂದ ಆಗಮಿಸಿದ್ದರು. ಅವರಿಗೆ ಜಾತ್ರೆ ಇಲ್ಲವೆಂದು ಅರ್ಥ ಮಾಡಿಸಿ  ವಾಪಸ್ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.

    ವರದಿ:  ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    2028ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನಗೂ ಅವಕಾಶ ಸಿಗಲಿ: ಪಿ.ಎನ್. ಕೃಷ್ಣಮೂರ್ತಿ

    September 25, 2026

    ಕೊರಟಗೆರೆ: ಬರಗಾಲದ ಹಿನ್ನೆಲೆ ‘ಹೊಲ ಹೂಳುವ ಗಣಪತಿ’ ಪ್ರತಿಷ್ಠಾಪನೆ; ಅದ್ದೂರಿಯಾಗಿ ಜರುಗಿದ ಶ್ರೀ ವಿದ್ಯಾ ಗಣಪತಿ ವಿಸರ್ಜನೆ!

    September 20, 2026

    ತುಮಕೂರಿನಲ್ಲಿ ಅತ್ಯಾಧುನಿಕ ‘ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ಲೋಕಾರ್ಪಣೆ; ಉದ್ಘಾಟಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    September 20, 2026

    Leave A Reply Cancel Reply

    Our Picks

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮೈಸೂರು ದಸರಾ: ಅ.11 ರಿಂದ ಕನ್ನಡ ಪುಸ್ತಕ ಮಾರಾಟ ಮೇಳ: ಮಾರಾಟಗಾರರಿಗೆ ಆಹ್ವಾನ

    September 25, 2026

    ತುಮಕೂರು: ಜಗತ್ಪ್ರಸಿದ್ಧ ಮೈಸೂರು ದಸರಾ ಉತ್ಸವ–2026ರ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು…

    ಕರ್ನಾಟಕದಲ್ಲಿ ಬರದಿಂದ 40 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಾಧ್ಯತೆ: ಡಿಸಿಎಂ ಜಿ.ಪರಮೇಶ್ವರ್

    September 25, 2026

    ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!

    September 25, 2026

    ಬೆಂಗಳೂರಿಗೆ ಬಂದ MLAಗಳು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ’: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

    September 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.