ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಮಾದೇನಹಳ್ಳಿ ತಾಂಡದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕಿ ಗುಣಶೀಲ ಅವರು ಬೇರೆಡೆ ವರ್ಗಾವಣೆಯಾದ ಹಿನ್ನೆಲೆ ಗ್ರಾಮಸ್ಥರು ಬೀ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.
ಮಾದೇನಹಳ್ಳಿ ತಾಂಡದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 14 ವರ್ಷದಿಂದ ಮುಖ್ಯ ಶಿಕ್ಷಕಿ ಗುಣಶೀಲ ಅವರು ಈ ಗ್ರಾಮದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಪಾಠವನ್ನ ಹೇಳಿ ಕೊಟ್ಟಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿರುವ ಉದಾಹರಣೆಗಳಿವೆ ಎಂದು ಇಲ್ಲಿನ ಪೋಷಕರು ತಿಳಿಸಿದ್ದಾರೆ. ಮುಖ್ಯ ಶಿಕ್ಷಕಿ ವರ್ಗಾವಣೆ ಆಗಿರುವುದು ಇಲ್ಲಿನ ಗ್ರಾಮಸ್ಥರಿಗೆ ನೋವು ತಂದಿದೆ ಎಂದು ಪೋಷಕರು ತಮ್ಮ ಆಳಲನ್ನ ತೊಡಿಕೊಂಡರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಣ್ಣ ಮಾತನಾಡಿ, ಮುಖ್ಯ ಶಿಕ್ಷಕಿ ಗುಣಶೀಲ ಅವರು 14 ವರ್ಷದಿಂದ ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಮ್ಮ ಬಡ ಮಕ್ಕಳಿಗೆ ಭೋದನೆ ಮಾಡುತ್ತಿದ್ದರು. ಇಲ್ಲಿ ಇವರು ಕೇವಲ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರಲಿಲ್ಲ ನಮ್ಮ ಗ್ರಾಮದ ಹೆಣ್ಣು ಮಗಳು ತರ ಇಷ್ಟು ವರ್ಷ ಇಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇವತ್ತು ಅವರಿಗೆ ವರ್ಗಾವಣೆಯಾಗಿದೆ. ನಮಗೆ ತುಂಬ ಬೇಸರ ತಂದಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಗುಣಶೀಲ ಮಾತನಾಡಿ, ಈ ಗ್ರಾಮದಲ್ಲಿರುವ ಸಾರ್ವಜನಿಕರು ಹಾಗೂ ಪೋಷಕರ ಸಹಕಾರದಿಂದ ನಾನು 14 ವರ್ಷ ಇಲ್ಲಿ ನನ್ನ ಸೇವೆಯನ್ನ ಸಲ್ಲಿಸಿದ್ದೇನೆ. ನನ್ನ ಸೇವಾವಧಿಯಲ್ಲಿ ಸಾಕಷ್ಟು ಮಕ್ಕಳಿಗೆ ನನ್ನ ವೃತ್ತಿಗೆ ಮೋಸ ಮಾಡದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇವತ್ತು ದೊಡ್ಡ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಮಾದೇನಹಳ್ಳಿ ಗ್ರಾಮಸ್ಥರು ಮುಖ್ಯ ಶಿಕ್ಷಕಿ ಗುಣಶೀಲ ಅವರಿಗೆ ಸನ್ಮಾನಿಸಿ ಗೌರವಿಸಿದರು. ಗ್ರಾಮದ ಹಳೆ ವಿದ್ಯಾರ್ಥಿಗಳು ಶಿಕ್ಷಕಿ ವರ್ಗಾವಣೆ ಹಿನ್ನೆಲೆ ಹೊಳಿಗೆ ಊಟ ಸವಿದರು. ನಂತರ ಊರಿನ ಮಹಿಳೆಯರು ಶಿಕ್ಷಕಿಗೆ ಬಾಗಿನ ನೀಡುವ ಮೂಲಕ ಬೀಳ್ಕೊಟ್ಟರು.
ಇದೆ ಸಂದರ್ಭದಲ್ಲಿ ಬಿಒಇ ಫೈರೋಜ್ ಬೇಗಮ್, ರವಿಕುಮಾರ, ರಾಮೇಗೌಡ ಎಸ್ ಡಿಎಂಸಿ ಅಧ್ಯಕ್ಷ ರಮೇಶ್‌ನಾಯ್ಕ್, ಉಪಾಧ್ಯಕ್ಷ ಸುರೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಗಂಗಾಧರ್, ವಿನೋದ್, ವೆಂಕಟೇಶ್ ನಾಯ್ಕ್, ಮಂಜುಳಬಾಯಿ, ಯಶಸ್ವಿನಿ ಬಾಗ್ಯಬಾಯಿ, ಸುಮೀತ್ರಬಾಯಿ, ತಾವರನಾಯ್ಕ್, ಗೀತಾಬಾಯಿ, ಚಂದ್ರು, ಸುಬಾಸ್, ರೇಖಾನಾಯ್ಕ್, ಸಂತೋಷ್, ಮುಚ್ಚಿನಾಯ್ಕ್, ಪವನ್‌ಕುಮಾರ್, ಆಕಾಶ್, ಸಂದೇಶ್ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


