nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ

    August 27, 2026

    ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ

    August 27, 2026

    ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

    August 27, 2026
    Facebook Twitter Instagram
    ಟ್ರೆಂಡಿಂಗ್
    • ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ
    • ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ
    • ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
    • ಈದ್ ಮಿಲಾದ್: ಮೆರವಣಿಗೆಯಲ್ಲಿ ಭಾಗಿಯಾಗಿ ಶುಭಕೋರಿದ ಹಾಸನ ಸಂಸದ ಶ್ರೇಯಸ್ ಪಟೇಲ್
    • ತುಮಕೂರು: ವಿವಿಧ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
    • ಹಾಸನ: ಮುಸುಕಿನ ಜೋಳಕ್ಕೆ ‘ಬಿಳಿಸುಳಿ’ ರೋಗ ಬಾಧೆ: 7 ತಾಲೂಕು ಬರಪೀಡಿತ ಎಂದು ಘೋಷಿಸಿ: ಸಿಎಂಗೆ ಸಚಿವ ಶಿವಲಿಂಗೇಗೌಡ ಮನವಿ
    • ಹೆಡಗಾಪೂರದಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ: ಕೂಲಿಕಾರ್ಮಿಕರಿಗೆ ಹಳ್ಳಿಯಲ್ಲೇ ಸಿಗಲಿದೆ ಹೆಚ್ಚಿನ ಉದ್ಯೋಗಾವಕಾಶ
    • ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತದೆ: ಸಚಿವ ಡಾ. ಯತೀಂದ್ರ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್
    ಕೊರಟಗೆರೆ February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    By adminFebruary 19, 2026No Comments3 Mins Read
    manjunath

    ಕೊರಟಗೆರೆ: ಲಂಬಾಣಿ ಸಮುದಾಯಕ್ಕೆ ಶ್ರೀ ಸಂತ ಸೇವಾಲಾಲ್ ಮಹಾರಾಜ್ ರವರು ನೀಡಿದ ಕೊಡುಗೆ ಅಪಾರವಾಗಿದೆ ಅವರು ಪ್ರತಿಯೊಬ್ಬರಿಗೂ ಆರಾಧ್ಯ ದೈವರಾಗಿದ್ದಾರೆ ಅವರ ಆದರ್ಶ ತತ್ವ ನಾವೆಲ್ಲರೂ ಪಾಲಿಸಬೇಕು ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

    ಅವರು ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸೇವಾಲಾಲ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

    ಲಂಬಾಣಿ ಸಮುದಾಯದ ಜನರು ಕಾಡು, ಬೆಟ್ಟ ಗುಡ್ಡಗಳಲ್ಲಿ ಸಿಗುವ ಸೌದೆಗಳನ್ನು ಕಡಿದು ಅದನ್ನ ಮಾರಿ ಜೀವನ ಸಾಗಿಸುತ್ತಿದ್ದವರು. ಆದರೆ ಈಗ ಕಾಲ ಬದಲಾದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಎಲ್ ಪಿ ಜಿ ಸಿಲಿಂಡರ್ ಉಜ್ವಲ ಯೋಜನೆಯಿಂದ ಶೇಕಡಾ 99 ರಷ್ಟು ಕುಟುಂಬಗಳು ಇದರ ಉಪಯೋಗ ಪಡೆದುಕೊಳ್ಳುತ್ತಿವೆ.

    ಬೆಟ್ಟ ಗುಡ್ಡಗಳ ಮೇಲೆ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಬದುಕುತ್ತಿದ್ದ ಬಂಜಾರ ಸಮುದಾಯಕ್ಕೆ ಸರ್ಕಾರ ಕಂದಾಯ ಗ್ರಾಮಗಳಾಗಿ ಮಾಡಿ ಎಲ್ಲಾ ರೀತಿಯ ದಾಖಲೆಗಳನ್ನು ನೀಡುತ್ತಿದೆ. ಕೊರಟಗೆರೆ ತಾಲ್ಲೂಕಿನಲ್ಲಿರುವ ಎಲ್ಲಾ ತಾಂಡ, ಹಟ್ಟಿ ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿ ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಸುಮಾರು 2500 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಸಿಗಲಿದೆ ಎಂದರು.

    ತಾಲ್ಲೂಕು ಬಂಜಾರ ಲಂಬಾಣಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ್ ಮಾತನಾಡಿ ಸಂತ ಸೇವಾಲಾಲ್ ರವರ ಆಶೀರ್ವಾದ ನಮ್ಮ ಲಂಬಾಣಿ ಸಮುದಾಯದ ಮೇಲೆ ಸದಾ ಇರುತ್ತದೆ. ಲಂಬಾಣಿ ಸಮುದಾಯದವರು ಅತ್ಯಂತ ಕಷ್ಟ ಜೀವಿಗಳು ನಮ್ಮ ಅಜ್ಜಿ ತಾತನ ಕಾಲದಲ್ಲಿ ಕಾಡಿನಲ್ಲಿರುವ ಸೌದೆಗಳನ್ನು ಕತ್ತರಿಸಿ ಅದನ್ನ ಮಾರಿ ಬರುವಂತಹ ಹಣದಲ್ಲಿ ಜೀವನ ಸಾಗಿಸುತ್ತಿದ್ದಂತಹವರು ಶ್ರೀ ಸಂತ ಸೇವಾಲಾಲ್ ರವರು ತಮ್ಮ ಇಡೀ ಜೀವನವನ್ನೇ ಲಂಬಾಣಿ ಸಮುದಾಯಕ್ಕೋಸ್ಕರ ಮುಡಿಪಾಗಿಟ್ಟಿದ್ದಾರೆ ಎಂದರು.

    ತಾಲ್ಲೂಕು ಲಂಬಾಣಿ ಸಂಘದ ಪ್ರಧಾನ ಕಾರ್ಯದರ್ಶಿ ವಿ ಎನ್ ಮೂರ್ತಿ ಮಾತನಾಡಿ ಸಂತ ಸೇವಾಲಾಲ್ ಜನಿಸಿದ ಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಗಳು ನಡೆಯುತ್ತಿವೆ. ಸೂರಗೊಂಡನಕೊಪ್ಪ ಅತ್ಯುತ್ತಮ ಪ್ರವಾಸಿ ತಾಣವಾಗಿ ಸರ್ಕಾರ ಮಾಡುತ್ತಿದೆ, ಸೇವಾಲಾಲ್ ರವರು ಲಂಬಾಣಿ ಸಮುದಾಯ ಮದ್ಯ ವ್ಯಸನಿಗಳಾಗಬಾರದು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಕುಟುಂಬ ಗಳ ನಿರ್ವಹಣೆಯ ಜವಾಬ್ದಾರಿ ಹೊರಬೇಕು ಇದರ ಅರಿವನ್ನು ಲಂಬಾಣಿ ಸಮುದಾಯದ ಜನತೆಗೆ ಮೂಡಿಸಬೇಕೆಂದು ಸೇವಾಲಾಲ್ ರವರು ಚಿಂತನೆ ಪಟ್ಟವರು ಹಾಗಾಗಿ ಎಲ್ಲಾ ತಾಂಡಗಳಲ್ಲಿರುವ ಕುಟುಂಬಗಳಿಗೆ ಸೇವಾಲಾಲ್ ರವರ ಆದರ್ಶ ತತ್ವಗಳನ್ನು ಪಾಲಿಸುವ ಅರಿವನ್ನು ನಮ್ಮ ಯುವಕ ಮಿತ್ರರು ಮಾಡಬೇಕು ಎಂದು ಹೇಳಿದರು.

    ತಾಲ್ಲೂಕು ಲಂಬಾಣಿ ಸಂಘದ ಖಜಾಂಚಿ ವಿಜಯ ಶಂಕರ್ ಮಾತನಾಡಿ ಶ್ರೀ ಸೇವಾಲಾಲ್ ರವರು ಸಮಾಜಕ್ಕೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ಇವರು ಲಂಬಾಣಿ ಸಮುದಾಯದ ಅಭಿವೃದ್ಧಿಗಾಗಿ ಮತ್ತು ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ, ನೂರಾರು ವರ್ಷಗಳ ಹಿಂದೆಯೇ ನಮ್ಮ ಸಮುದಾಯ ಜನ ಮದ್ಯ ಮತ್ತು ತಂಬಾಕು ದುಶ್ಚಟಗಳಿಂದ ದೂರವಿರಬೇಕು ಎಂದು ಸಂದೇಶ ನೀಡಿದವರು. ನಿಜಾಮರ ಕಾಲದಲ್ಲಿ ದೊಡಮಟ್ಟದ ಕಾಲರ ರೋಗ ಬಂದಂತಹ ಸಂದರ್ಭದಲ್ಲಿ ಸಾವಿರಾರು ಜನರಿಗೆ ಔಷದಿನೀಡಿ ಬದುಕಿಸಿದ ಪವಾಡ ಪುರುಷ ಸೇವಾಲಾಲ್ ರವರು. ಹೈದರಾಬಾದ್ ನಲ್ಲಿರುವ ಈಗಿನ ಬಂಜಾರ ಹಿಲ್ಸ್ ಎಂಬ ಸ್ಥಳಕ್ಕೆ ಹೆಸರು ಬರಲು ಮೂಲ ಕಾರಣವೇ ಸೇವಾಲಾಲ್ ರವರು.  ಇಡೀ ತಮ್ಮ ಜೀವನವನ್ನೇ ಲಂಬಾಣಿ ಸಮುದಾಯಕ್ಕೋಸ್ಕರ ಮೂಡಿಪಾಗಿಟ್ಟ ಸೇವಾಲಾಲ್ ರವರ ದ್ಯೇಯೋದ್ದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ್ ರಾಮಪ್ರಸಾದ್, ಕೃಷಿ ಇಲಾಖೆ ಅಧಿಕಾರಿ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್, ಸಿ ಡಿ ಪಿ ಒ ಗಂಗಾಧರ್ ಸೇರಿದಂತೆ  ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಬಂಜಾರ ಲಂಬಾಣಿ ಸೇವಾ ಸಂಘ ಗೌರವಾಧ್ಯಕ್ಷ ಮೀಸೆ ಲಕ್ಷ್ಮನಾಯ್ಕ, ಉಪಾಧ್ಯಕ್ಷ ಹರೀಶ್ ಬಾಬು, ಸಿದ್ದೇಶ್, ಪುಟ್ಟರಾಜು, ಯುವ ಸಂಚಾಲಕರುಗಳಾದ ಬಾಬುನಾಯ್ಕ್ ಎಂ, ರಂಜಿತ್ ಕುಮಾರ್,  ಮುಖಂಡರುಗಳಾದ ಶ್ರೀನಿವಾಸ್ ನಾಯ್ಕ, ಮಾನ್ ಸಿಂಗ್ ನಾಯ್ಕ, ಲಚ್ಚಿರಾಮನಾಯ್ಕ, ರಾಮಸ್ವಾಮಿ ನಾಯ್ಕ ಬಾಲಾಜಿ ಸೇರಿದಂತೆ ಇತರರು ಹಾಜರಿದ್ದರು.

    ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲ್ಲೂಕಿನ ಶಕುನಿತಿಮ್ಮನಹಳ್ಳಿ ತಾಂಡದ ಲಂಬಾಣಿ ಸಮುದಾಯದ ಯುವಕ ಕಾಳಿಂಗನಾಯ್ಕ ರವರನ್ನು ಗುರುತಿಸಿ ಪಿ ಹೆಚ್ ಡಿ ಪದವಿ ಪಡೆದ ಕಾರಣ ಸನ್ಮಾನಿಸಿ ಗೌರವಿಸಲಾಯಿತು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

    August 22, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ

    August 27, 2026

    ಬೆಂಗಳೂರು: ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ…

    ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ

    August 27, 2026

    ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

    August 27, 2026

    ಈದ್ ಮಿಲಾದ್: ಮೆರವಣಿಗೆಯಲ್ಲಿ ಭಾಗಿಯಾಗಿ ಶುಭಕೋರಿದ ಹಾಸನ ಸಂಸದ ಶ್ರೇಯಸ್ ಪಟೇಲ್

    August 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.