ಕೊರಟಗೆರೆ: ತುಮಕೂರಿನ ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್‌ನ ಗೌತಮ್ ಹಾಗೂ ಈತನ ಅಕ್ಕ ಶಿಲ್ಪ ದೌರ್ಜನ್ಯದಿಂದ ಚೀಟಿ ಹಣ ವಸೂಲಿ ಮಾಡಲು ನನ್ನ ಭಾವಚಿತ್ರವಿರುವ ಕರಪತ್ರಗಳನ್ನು ಕುರಂಕೋಟೆ ಗ್ರಾಮ ಹಾಗೂ ತಾಲೂಕಿನಾದ್ಯಂತ ಗೋಡೆಗಳಿಗೆ ಅಂಟಿಸಿ ಸೋಷಿಯಲ್ ಮೀಡಿಯಾದೊಂದಿಗೆ ಮಾನ ಹರಾಜು ಹಾಕಿ ವೈಯಕ್ತಿಕವಾಗಿ ನನ್ನ ಮತ್ತು ನನ್ನ ಕುಟುಂಬವನ್ನು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ನೊಂದ ವ್ಯಕ್ತಿ ಕುರಂಕೋಟೆ ಸಿದ್ದರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೩-೨೪ರಲ್ಲಿ ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಐದು ಲಕ್ಷ ಸಾಲ ಪಡೆದಿದ್ದೇನೆ, ಸಾಲ ಪಡೆಯುವ ವೇಳೆ ನಮ್ಮ ಗ್ರಾಮದ ಗೌತಮ್ ಎಂಬಾತನು ಮ್ಯಾನೇಜರ್ ಆಗಿದ್ದು, ೩.೫ ಲಕ್ಷ ವರೆಗೆ ವಾಪಸ್ ಲಿಮಿಟೆಡ್ ಗೆ ಪಾವತಿಸಿದ್ದೇನೆ ಎಂದು ಹೇಳಿದರು.
ಬೈಕ್ ಅಪಘಾತವಾದ ಸಂದರ್ಭದಲ್ಲಿ ಗೌತಮ್ ರವರಿಗೆ ೬೫ ಸಾವಿರ ನಗದು ಹಣ, ಪೋನ್ ಪೇ ಮೂಲಕ ೧ ಲಕ್ಷ ಹಣ ಪಾವತಿಸಿದ್ದೇನೆ, ನೀಡಿದ ೬೫ ಸಾವಿರ ನಗದು ಹಣವನ್ನು ಲಿಮಿಟೆಡ್ ಗೆ ಸಂದಾಯ ಮಾಡಿಲ್ಲ, ಕೊಡಚಾದ್ರಿ ಸಂಸ್ಥೆಯಿಂದ ಹೋರ ಬಂದು ಸೂರ್ಯಪುತ್ರ ಎಂಬ ಸಂಸ್ಥೆಯಲ್ಲಿ ಮ್ಯಾನೇಜರ್ ಎಂದು ಹೇಳಿ ಸಾಲ ಕೊಡಿಸುವ ಭರವಸೆ ನೀಡಿದ್ದರಿಂದ ೫೦ ಸಾವಿರ ನೀಡಿದ್ದೇನೆ, ಮೂರು ತಿಂಗಳ ನಂತರ ನಿನ್ನ ಹಣ ಕಂಪನಿಗೆ ಕಟ್ಟಿದ್ದೇನೆ ಎಂದು ಧಮಕಿ ಕೂಡ ಹಾಕಿ ನೀನು ಈ ಹಣದ ಸುದ್ದಿಗೆ ಬಂದರೆ ಗತಿ ಕಾಣಿಸುತ್ತೇನೆಂದು ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದರು.
ಕೊಟ್ಟಿರುವ ಹಣವನ್ನು ನಮ್ಮ ಕುಟುಂಬದವರು ಕೇಳಿದಾಗ ಹಲ್ಲೆಗೆ ಮುಂದಾಗಿದ್ದಾನೆ, ಮಾ.೧ರಂದು ನನ್ನ ಭಾವಚಿತ್ರವನ್ನು ಅಂಟಿಸಿದ್ದು, ಸಂಸ್ಥೆಯವರನ್ನು ಅಂಟಿಸಿದಾಗ ನಾವು ಯಾವುದೇ ಚೀಟಿ ಅಂಟಿಸಿಲ್ಲ ಎಂದು ಹೇಳಿದ್ದು, ರಾಜ್ಯ ಸುದ್ದಿ ವಾಹಿನಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಗೌತಮ್ ಅಕ್ಕ ಶಿಲ್ಪ ಕುರಂಕೋಟೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಜು ಒಬ್ಬ ದೊಡ್ಡ ಮೋಸಗಾರ, ಅಧಿಕಾರಿಗಳನ್ನು ಮತ್ತು ಜನರನ್ನು ಬೆದರಿಸಿ ಬೆದರಿಸಿ ಜೀವನ ಮಾಡುತ್ತಿದ್ದಾನೆ, ದೇವಸ್ಥಾನ ಪಂಪು ಮೋಟಾರ್, ಲೆಂತ್ ಗಳನ್ನು ಕಳ್ಳತನ ಮಾಡಿದ್ದಾನೆ, ಜನಗಳನ್ನು ಹೆದರಿಸಿಕೊಂಡು ಜೀವನ ಮಾಡುವುದೇ ಇವನ ಕೆಲಸ ಎಂದು ಅವಮಾನಿಸಿದ್ದಾರೆ ಎಂದು ಮಾಧ್ಯಮದ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದು, ಸಂಬಂಧ ಪಟ್ಟ ಇಲಾಖೆ ರಕ್ಷಣೆ ನೀಡಿ ನ್ಯಾಯ ಒದಗಿಸುವಂತೆ ಪತ್ರಿಕಾಗೋಷ್ಟಿ ಮೂಲಕ ಕೋರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


