ಕೊಪ್ಪಳ: ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧದ ನಡುವೆಯೂ ಪುನೀತ್ ಕೆರೆಹಳ್ಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅಂಜನಾದ್ರಿ ಬೆಟ್ಟ ಏರಿದ ಘಟನೆ ನಡೆದಿದೆ.
ಈ ಹಿಂದೆ ನೀಡಿದ್ದ ವಿವಾದಾತ್ಮಕ ಭಾಷಣಗಳ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.
ಜಿಲ್ಲಾಡಳಿತದ ಈ ಆದೇಶವನ್ನು ಮೀರಿ ಅಂಜನಾದ್ರಿ ಬೆಟ್ಟದ ಬಳಿ ಬಂದ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ತಡೆದರು. ಈ ವೇಳೆ ನಿಷೇಧಾಜ್ಞೆ ಪ್ರತಿಯನ್ನು ತೋರಿಸಿದ ಪೊಲೀಸರೊಂದಿಗೆ ಕೆರೆಹಳ್ಳಿ ತೀವ್ರ ವಾಗ್ವಾದ ನಡೆಸಿದರು. ಅಲ್ಲದೆ, ಪೊಲೀಸರು ನೀಡಿದ ನೋಟಿಸ್ ಹಾಗೂ ಆದೇಶದ ಪ್ರತಿ “ನಕಲಿ” ಎಂದು ಆರೋಪಿಸಿದರು.
ತೀವ್ರ ಚರ್ಚೆ ಮತ್ತು ಹೈಡ್ರಾಮಾ ಬಳಿಕ, ಅಂತಿಮವಾಗಿ ಪೊಲೀಸರ ಭದ್ರತೆಯ ನಡುವೆಯೇ ಪುನೀತ್ ಕೆರೆಹಳ್ಳಿ ಅಂಜನಾದ್ರಿ ಬೆಟ್ಟ ಏರಿ ಹನುಮಂತನ ದರ್ಶನ ಪಡೆದರು.
ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಇವರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಆದರೆ ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಪುನೀತ್ ಬೆಟ್ಟ ಏರಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಪೊಲೀಸರ ಅಸಮರ್ಥತೆಯ ಬಗ್ಗೆ ಚರ್ಚೆಯಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


