ಸರಗೂರು: ಹಬ್ಬ ಹರಿದಿನಗಳಲ್ಲಿ ಗ್ರಾಮದಲ್ಲಿ ಪಂದ್ಯಾವಳಿಯನ್ನು ನಡೆಸಿಕೊಂಡು ಬಂದರೆ ಇವತ್ತಿನ ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಯುತ್ತದೆ ಎಂದು ಬಲಗೈ ಸಮಾಜದ ಮಹಾಸಭಾ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಮಸಹಳ್ಳಿ ಎಂ.ಪಿ.ಸೂರ್ಯ ಕುಮಾರ್ ತಿಳಿಸಿದರು.
ತಾಲ್ಲೂಕಿನ ಮಸಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶನಿವಾರ ಮತ್ತು ಭಾನುವಾರದಂದು ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿಗೆ ನಡೆದು ಚಾಲನೆ ನೀಡಿ ನಂತರ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಯುವ ಆಟಗಾರರು ಇದ್ದಾರೆ, ಹೆಚ್ಚು ಓದುವ ಹವ್ಯಾಸ ಜೊತೆಯಲ್ಲಿ ಕ್ರೀಡೆಯನ್ನು ಬಳಸಿಕೊಂಡು ಮನಸ್ಸಿಗೆ ನೆಮ್ಮದಿ ಶಾಂತಿ ಸಿಕ್ಕುತ್ತದೆ. ಕೆಟ್ಟ ಹವ್ಯಾಸದಿಂದ ದೂರ ಇದ್ದು ಕ್ರೀಡೆಯಲ್ಲಿ ಭಾಗವಹಿಸಿ ಯುವ ಪೀಳಿಗೆ ಯುವಕರಿಗೆ ಆಟವಾಡಲು ಪ್ರಾರಂಭಿಸುತ್ತಾರೆ. ತಂದೆ ತಾಯಿ ಹಾಗೂ ಶಾಲೆ ಮತ್ತು ಶಿಕ್ಷಕರಿಗೆ ಗೌರವ ನೀಡುವ ನಿಟ್ಟಿನಲ್ಲಿ ಆಟವಾಡಬೇಕು ಎಂದರು.
ಮೊದಲನೇ ಬಹುಮಾನ ಪಡೆದ ತಂಡ ರಾವಣ ಸ್ಟಾರ್ ತಂಡ, ದ್ವಿತೀಯ ಸ್ಥಾನ ಪಡೆದ ಜೈ ಭೀಮ್, ಸ್ಟಾರ್, ಮೂರನೇ ಸ್ಥಾನ ಪಡೆದ ಭೀಮ ಬಾಯ್ಸ್ ಪಡೆದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ರುಕ್ಮಿಣಿ ಪುಟ್ಟಯ್ಯ, ಗ್ರಾಮದ ಯಜಮಾನರು ಹನುಮಂತಯ್ಯ, ಮುಖಂಡರಾದ ವೈರುಮುಡಿಯ್ಯ, ಸೂರ್ಯ ಕುಮಾರ್ ಎಂ., ನಾಗೇಶ್ ಅಭಿ, ಮಹೇಶ್, ಸುರೇಶ್, ಸತೀಶ್,ಸಣ್ಣಯ್ಯ, ಬಸವರಾಜು, ಚಲುವರಾಜು, ಮಧು, ಪ್ರಸನ್ನ, ಸುನೀಲ್, ಮಹಾದೇವಯ್ಯ, ಇನ್ನೂ ಮುಖಂಡರು ಸೇರಿದಂತೆ ಹಾಗೂ ಎಲ್ಲಾ ತಂಡದ ಆಟಗಾರರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


