ಮಿಡಿಗೇಶಿ: ಆಸೆ ಆಮಿಷವೊಡ್ಡಿ ಬಾಲಕಿಯೋರ್ವಳನ್ನು ಬೈಕ್ ನಲ್ಲಿ ಕರೆದೊಯ್ದು ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏಪ್ರಿಲ್ 23ರ ಸಂಜೆ ಮಿಡಿಗೇಶಿ ವ್ಯಾಪ್ತಿಯ ಗ್ರಾಮವೊಂದರಲ್ಲಿ 16 ವರ್ಷದ ಬಾಲಕಿ ಬಹಿರ್ದೆಸೆಗೆಂದು ಹೊರಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಆಕೆ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದರು.
ಸಂಬಂಧಿಕರು ಮತ್ತು ಗ್ರಾಮಸ್ಥರನ್ನು ವಿಚಾರಿಸುತ್ತಿರುವಾಗ ನಿಮ್ಮ ಮಗಳು ಹೀರಮುದ್ದಯ್ಯ ಎಂಬುವವರೊಂದಿಗೆ ಆಗಾಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಬಗ್ಗೆ ತಿಳಿಸಿದರು. ಈ ಬಗ್ಗೆ ಬೆಂಗಳೂರಿನಲ್ಲಿರುವ ಹೀರಮುದ್ದಯ್ಯನಿಗೆ ಕರೆ ಮಾಡಲಾಗಿ ನನಗೇನೂ ತಿಳಿದಿಲ್ಲ ಎಂದು ಕರೆ ಕಟ್ ಮಾಡಿದ್ದ.
ಪೋಷಕರು ಠಾಣೆಗೆ ದೂರು ನೀಡಲಾಗಿ ಕೃತ್ಯ ಹೊರಬಂದಿದೆ. ಅಂದರೆ, ಹೀರಮುದ್ದಯ್ಯನು ಬಾಲಕಿಯನ್ನು ತನ್ನ ಬೈಕ್ ನಲ್ಲಿ ಕರೆದೊಯ್ದು ಮೈಸೂರಿಗೆ ಹೋಗಿದ್ದಾನೆ. ಅಲ್ಲಿ ಸ್ನೇಹಿತರ ಮನೆಯಲ್ಲಿ ತಂಗಿದ್ದು, ಹೋಗಿಬರುವಾಗ ಕೆನ್ನೆ ಮುಟ್ಟುವುದು, ಮೈ ಮುಟ್ಟುವುದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
ಪೋಷಕರ ದೂರು ಹಾಗೂ ಬಾಲಕಿಯ ಹೇಳಿಕೆಯನ್ನು ಪಡೆದು ಪೊಲೀಸರು ಬಿಎನ್‌ಎಸ್ ಕಾಯ್ದೆ ಕಲಂ 137 (2), ಪೋಕ್ಸೋ ಕಾಯ್ದೆ ಕಲಂ 8 ಮತ್ತು 12ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


