ತುಮಕೂರು: ನಗರದ ರೈಲ್ವೆ ಸ್ಟೇಷನ್ ರಸ್ತೆಯ ಜಿಯೋ ಸ್ಕ್ಯಾನಿಂಗ್ ಸೆಂಟರ್ ಮುಂಭಾಗ 35 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ನಿಸ್ತ್ರಾಣವಾಗಿ ಬಿದ್ದಿದ್ದು, ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಅಲ್ಲಿ ಚಿಕಿತ್ಸೆ ಫಲಿಸದೆ ಸದರಿ ವ್ಯಕ್ತಿ ಮೃತಪಟ್ಟಿರುತ್ತಾರೆ. ಕೋಲು ಮುಖ, ತೆಳ್ಳನೆಯ ಶರೀರ, ಗೋಧಿ ಮೈಬಣ್ಣ, ಮೀಸೆ ಬಿಟ್ಟಿರುತ್ತಾನೆ. ಈತನ ಮೈಮೇಲೆ ಬಿಳಿ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಅದೇ ರೀತಿ ಮಹಾಲಕ್ಷ್ಮಿ ನಗರ ಬಡಾವಣೆಯ ಅಂಗಡಿ ಮಳಿಗೆ ಮುಂಭಾಗ ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾರೆ. ಕೋಲು ಮುಖ, ತೆಳ್ಳನೆಯ ಶರೀರ, ಕಪ್ಪು ಮೈಬಣ್ಣ ಹೊಂದಿದ್ದಾನೆ. ಇವರ ಮೈಮೇಲೆ ಕಂದು ಬಣ್ಣದ ಬರ್ಮುಡಾ ನಿಕ್ಕರ್ ಧರಿಸಿದ್ದಾನೆ.
ಈ ಇಬ್ಬರು ಮೃತ ವ್ಯಕ್ತಿಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಹೊಸ ಬಡಾವಣೆ ಪೊಲೀಸರನ್ನಾಗಲಿ ಅಥವಾ 9480802951 ಇವರನ್ನು ಸಂಪರ್ಕಿಸುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


