ತುಮಕೂರು: ತುಮಕೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ ಇವರ ವತಿಯಿಂದ ಕೃತಕ ಬುದ್ಧಿಮತ್ತೆ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣ: ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಮೇ 11 ರಂದು ಕೇಂದ್ರ ಗ್ರಂಥಾಲಯದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11.20 ರಿಂದ 11.30ರವರೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ನೆರವೇರಿಸುವರು. ಅಧ್ಯಕ್ಷತೆಯನ್ನು ಎಂಎಲ್‌ಸಿ ಪುಟ್ಟಣ್ಣ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಎಂಎಲ್‌ಸಿ ಡಿ. ಟಿ. ಶ್ರೀನಿವಾಸ್, ಪ್ರೊ.ಕೆ.ರಾಮಕೃಷ್ಣರೆಡ್ಡಿ, ಶಶಿ ಹುಲಿಕುಂಟೆಮಠ್ ಆಗಮಿಸುವರು. ಡಾ.ಜಿ.ತಿಪ್ಪೇಸ್ವಾಮಿ ಉಪಸ್ಥಿತರಿರುವರು.
ಬೆಳಗ್ಗೆ 11.45 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರೊ. ಪಿ. ಪರಮಶಿವಯ್ಯ, ಪ್ರೊ. ಬಸವರಾಜ ಎಸ್. ಬೆನ್ನಿ, ಪ್ರೊ. ಆಶಾಗೌಡ ಕರೇಗೌಡರ, ವಿಶೇಷ ಆಹ್ವಾನಿತರಾಗಿ ಪ್ರೊ. ಕೆ. ಸಿ. ಬಸವರಾಜು, ಡಾ. ಎನ್. ಪಿ. ಶಿವಾನಂದಯ್ಯ, ಡಾ. ಡಿ. ಶಿವನಂಜಯ್ಯ, ಡಾ. ಒ. ನಾಗರಾಜು, ಡಾ. ಆರ್. ಪುಟ್ಟರಾಜು ಅವರುಗಳು ಆಗಮಿಸುವರು.
ಸಂಜೆ 4.45 ರಿಂದ 5.30ರವರೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ತಿಪ್ಪೇಸ್ವಾಮಿ ಜಿ. ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರೊ. ಟಿ.ಡಿ.ವಸಂತ, ಅತಿಥಿಗಳಾಗಿ ಈಶ್ವರಪ್ಪ, ಡಾ.ಎಂ.ಎಸ್.ನಾಗರಾಜು, ಹನುಮಂತರಾಯಪ್ಪ ಅವರುಗಳು ಆಗಮಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


