ತುಮಕೂರು: ಜಿಲ್ಲೆಯಲ್ಲಿ ಕೆಲವೆಡೆ ಮಳೆಯಾಗುತ್ತಿದ್ದು, ಶನಿವಾರ ಬೆಳಿಗ್ಗೆ ದಾಖಲಾದ ಮಳೆಮಾಪನ ವರದಿಯಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 0.3 ಮಿಮೀ ಮಳೆ ಪ್ರಮಾಣ ದಾಖಲಾಗಿದೆ.
ಅತ್ಯಧಿಕ ಮಳೆ ಇಟಕಡಿಬ್ಬನಹಳ್ಳಿ ಹೋಬಳಿಯಲ್ಲಿ 5.9 ಮಿಮೀ(ಅರ್ಧಸೆಂ.ಮೀಗೂ ಅಧಿಕ) ದಾಖಲಾಗಿದ್ದು, ಸಿ.ಎಸ್.ಪುರದಲ್ಲಿ 0.2 ಮಿಮೀ, ಚೇಳೂರಿನಲ್ಲಿ 0.1 ಮಿಮೀ, ಕಡಬದಲ್ಲಿ 0.5 ಮಿಮೀ, ಚನ್ನರಾಯನದುರ್ಗದಲ್ಲಿ 0.4 ಮಿಮೀ, ಕೋಳಾಲದಲ್ಲಿ 0.4 ಮಿಮೀ, ಯಡಿಯೂರಿನಲ್ಲಿ 0.1 ಮಿಮೀ. ದೊದ್ದೇರಿಯಲ್ಲಿ 0.4 ಮಿಮೀ, ಕೊಡಿಗೇನಹಳ್ಳಿಯಲ್ಲಿ 0.3 ಮಿಮೀ ಹಾಗೂ ಮಿಡಿಗೇಶಿಯಲ್ಲಿ 0.2 ಮಿಮೀ ಮಳೆ ಪ್ರಮಾಣ ದಾಖಲಾಗಿದೆ.
ಗುಬ್ಬಿಯಲ್ಲಿ 0.2 ಮಿಮೀ, ಕೊರಟಗೆರೆಯಲ್ಲಿ 0.2 ಮಿಮೀ, ಮಧುಗಿರಿಯಲ್ಲಿ 1.1 ಮಿಮೀ, ಪಾವಗಡದಲ್ಲಿ 0.1 ಮಿಮೀ, ಸಿರಾದಲ್ಲಿ 0.1 ಮಿಮೀ, ತಿಪಟೂರಲ್ಲಿ 0.4 ಮಿಮೀ, ತುಮಕೂರಿನಲ್ಲಿ 0.1 ಮಿಮೀ ಹಾಗೂ ತುರುವೇಕೆರೆಯಲ್ಲಿ 1.6 ಮಿಮೀ ಮಳೆ ದಾಖಲಾಗಿದ್ದು, ಉಳಿದ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಶೂನ್ಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


