ತಿಪಟೂರು: ನಗರದಲ್ಲಿ ಕಳೆದ ಸುಮಾರು 66 ವರ್ಷಗಳಿಂದ ನಿರಂತರವಾಗಿ ಜನಪರ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿರುವ ‘ತಿಪಟೂರು ರೋಟರಿ ಕ್ಲಬ್’, ಇದೀಗ ಯಶಸ್ವಿಯಾಗಿ 67ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲೇ ಕ್ಲಬ್ ನ ಮುಕುಟಕ್ಕೆ ಮತ್ತೊಂದು ರಾಜ್ಯಮಟ್ಟದ ಗರಿ ಸೇರ್ಪಡೆಯಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಐ.ಸಿ.ಜಿ.ಎಫ್ (ICGF) ಕಾರ್ಯಕ್ರಮದಲ್ಲಿ, ತಿಪಟೂರು ರೋಟರಿ ಕ್ಲಬ್‌ನ ಪಬ್ಲಿಕ್ ಇಮೇಜ್ ವಿಭಾಗಕ್ಕೆ ರಾಜ್ಯಮಟ್ಟದ “ಎಕ್ಸಲೆನ್ಸ್ ಆಫ್ ಪಬ್ಲಿಕ್ ಇಮೇಜ್” (Excellence of Public Image) ಪ್ರಶಂಸನಾ ಪತ್ರ ಹಾಗೂ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಸಂಸ್ಥೆಯ ಕೀರ್ತಿ ರಾಜ್ಯಮಟ್ಟದಲ್ಲಿ ಮತ್ತಷ್ಟು ಹೆಚ್ಚಿದಂತಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ತಿಪಟೂರು ರೋಟರಿ ಸಂಸ್ಥೆಯ ಪಬ್ಲಿಕ್ ಇಮೇಜ್ ನಿರ್ದೇಶಕರಾಗಿ ಅತ್ಯಂತ ಸಮರ್ಥ ಹಾಗೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರಕಾಶ್ ಕೆ. ಅವರನ್ನು ಸಂಸ್ಥೆಯ 67ನೇ ವರ್ಷದ ಚುನಾಯಿತ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಕಾಶ್ ಅವರ ಸುದೀರ್ಘ ಮತ್ತು ಯಶಸ್ವಿ ಸಾರ್ವಜನಿಕ ಸಂಪರ್ಕದ ಸೇವೆಯನ್ನು ಗುರುತಿಸಿ ಈ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಲಾಗಿದೆ ಎಂಬುದು ಗಮನಾರ್ಹ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


